ರಾಜ್ಯ ಸುದ್ದಿ

ಅಂಗವಿಕಲರ ರಾಜ್ಯಮಟ್ಟದ ಉದ್ಯೋಗ ಮೇಳ: 599 ಅಂಗವಿಕಲರು ಉದ್ಯೋಗಕ್ಕೆ ಆಯ್ಕೆ

ಬೆಂಗಳೂರು: ಕೋರಮಂಗಲದ ಕೆಎಸ್​ಆರ್​ಪಿ ಮೈದಾನದಲ್ಲಿ ಅಂಗವಿಕಲರ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಡಾ. ಜಯಮಾಲಾ ಉದ್ಘಾಟಿಸಿದರು.

ವಿ.ಆರ್ ಯುವರ್ ವಾಯ್ಸ್ ಸಂಸ್ಥೆಯು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಸೋಮವಾರ ಕೋರಮಂಗಲದ ಕೆ.ಎಸ್.ಆರ್.ಪಿ. 4ನೇ ಬೆಟಾಲಿಯನ್ ಮೈದಾನದಲ್ಲಿ ಆಯೋಜಿಸಿದ ಅಂಗವಿಕಲರ ರಾಜ್ಯ ಮಟ್ಟದ ಉದ್ಯೋಗ ಮೇಳದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಉದ್ಯೋಗ ಮೇಳದಲ್ಲಿ 599 ಅಂಗವಿಕಲರು ಅಂತಿಮವಾಗಿ ಆಯ್ಕೆಯಾದರೆ, 2,343 ಮಂದಿ ತಾತ್ಕಾಲಿಕವಾಗಿ ಆಯ್ಕೆಯಾಗಿದ್ದಾರೆ.

ನಗರದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಂಗವಿಕಲರಿಗೆ ಉದ್ಯೋಗ ನೀಡಲಾಗಿದೆ. ಒಟ್ಟು 6 ಸಾವಿರ ಅಂಗವಿಕಲರು ನೋಂದಣಿ ಮಾಡಿಕೊಂಡಿದ್ದರು. ಇವರಿಗೆ ಉದ್ಯೋಗ ನೀಡಲು 150 ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವು.

2 ಸಾವಿರ ಸ್ವಯಂ ಸೇವಕರ ನೆರವು: ಮೇಳಕ್ಕೆ ಬಂದಿದ್ದ ಅಂಗವಿಕಲರಿಗೆ 2 ಸಾವಿರ ಸ್ವಯಂಸೇವಾ ಕಾರ್ಯಕರ್ತರು ಸಹಕರಿಸಿದರು. ಶಾಸ್ತ್ರಿ ಸ್ಮಾರಕ ವಿಶೇಷ ಶಾಲೆಯ ವಿಜಯಲಕ್ಷ್ಮಿ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಊಟದ ವ್ಯವಸ್ಥೆ ಕಲ್ಪಿಸಿ, ರಾಜ್ಯದ ವಿವಿಧೆಡೆಯಿಂದ ಬಂದ ಉದ್ಯೋಗಾಕಾಂಕ್ಷಿಗಳಿಗೆ 6 ಬಸ್ ಸೇವೆ ಒದಗಿಸಿದ್ದರು. ಅಂಗವಿಕಲರಿಗಾಗಿ 13 ಬಸ್ಸುಗಳು ಮತ್ತು ಸಂಜ್ಞಾಭಾಷಾ ತಜ್ಞರ ಸೇವೆ ಕಲ್ಪಿಸಿದ್ದರು.

About the author

ಕನ್ನಡ ಟುಡೆ

Leave a Comment