ರಾಷ್ಟ್ರ ಸುದ್ದಿ

ಅಂಡಮಾನ್​ ನಿಕೋಬಾರ್ ನ ಮೂರು ದ್ವೀಪಗಳಿಗೆ ಪ್ರಧಾನಿ ಮೋದಿ ಮರುನಾಮಕರಣ

ನವದೆಹಲಿ: ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಅಂಡಮಾನ್​ ನಿಕೋಬಾರ್ ​ನ ಪ್ರಮುಖ ಮೂರು ದ್ವೀಪಗಳಾದ ರೋಸ್, ನೈಲ್ ಹಾಗೂ ಹೈವ್ಲೋಕ್ ದ್ವೀಪಗಳಿಗೆ ಭಾನುವಾರ ಮರು ನಾಮಕರಣ ಮಾಡಿದ್ದಾರೆ.
ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ 75ನೇ ಪೋರ್ಟ್‌ಬ್ಲೇರ್‌ ಭೇಟಿಯ 75ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಭಾಗಿಯಾಗಲು ಇಂದು ದ್ವೀಪ ಸಮೂಹಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಈ ಮೂರು ದ್ವೀಪಗಳಿಗೆ ಅಧಿಕೃತವಾಗಿ ಮರುನಾಮಕರಣ ಮಾಡಿದರು. ರೋಸ್​ಲ್ಯಾಂಡ್​ಗೆ ನೇತಾಜಿ ಸುಭಾಷ್​ ಚಂದ್ರ ಬೋಸ್​ ದ್ವೀಪ, ನೇಲ್​ ಐಸ್​ಲ್ಯಾಂಡ್​ಗೆ ಶಾಹೀದ್ ದ್ವೀಪ ಮತ್ತು ಹೈವ್ಲೋಕ್​ ದ್ವೀಪಕ್ಕೆ ಸ್ವರಾಜ್​ ದ್ವೀಪವೆಂದು ನಾಮಕರಣ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿ, ಈ ವಿಶೇಷ ದಿನದ ಸ್ಮರಣಾರ್ಥ ಅಂಚೆಚೀಟಿ, 75 ನಾಣ್ಯಗಳನ್ನೂ ಬಿಡುಗಡೆ ಮಾಡಿದರು. ಅಲ್ಲದೆ ದಿ.ಬೋಸ್​ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಪ್ರಧಾನಿ ಘೋಷಿಸಿದರು. ಇದಕ್ಕೂ ಮೊದಲು ಮರೀನಾ ಪಾರ್ಕ್​ಗೆ ತೆರಳಿದ ಮೋದಿ, 150 ಅಡಿ ಎತ್ತರದಲ್ಲಿ ಭಾರತದ ಧ್ವಜ ಹಾರಿಸಿದರು. ಹಾಗೇ ಅಲ್ಲಿಯೇ ಇದ್ದ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

About the author

ಕನ್ನಡ ಟುಡೆ

Leave a Comment