ಸಿನಿ ಸಮಾಚಾರ

ಅಂತ್ಯಕ್ರಿಯೆಗೆ ಬಾರದ ರಮ್ಯಾ ಮಂಡ್ಯ ಪಾಲಿಗೆ ಸತ್ತಳೆಂದು ಅಂಬಿ ಅಭಿಮಾನಿಗಳ ಆಕ್ರೋಶ

ಮಂಡ್ಯ: ನಟ ಅಂಬರೀಷ್​ ಅಂತ್ಯಕ್ರಿಯೆಗೆ ಬಾರದ ಮಾಜಿ ಸಂಸದೆ ರಮ್ಯಾ ವಿರುದ್ಧ ಅಂಬಿ ಅಭಿಮಾನಿಗಳ ಆಕ್ರೋಶ ಮುಂದುವರಿದಿದೆ. ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ವಿರುದ್ಧ ಪೋಸ್ಟ್​ಗಳನ್ನು ಹಾಕಿ ಅಂಬಿ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ರಮ್ಯಾಗೆ ‘ಭಾವಪೂರ್ಣ ಶ್ರದ್ಧಾಂಜಲಿ’ ಹಾಗೂ ‘ಮಂಡ್ಯ ಪಾಲಿಗೆ ಇಂದು ಸತ್ತ ರಮ್ಯಾ’ ಎಂದೆಲ್ಲ ಬರೆದು ತೀವ್ರವಾಗಿ ಟೀಕಿಸುತ್ತಿದ್ದಾರೆ.

2013ರ ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ರಮ್ಯಾ ಸ್ಪರ್ಧೆಗೆ ಅಂಬಿ ಕಾರಣಕರ್ತರಾಗಿದ್ದರು. ಅಲ್ಲದೆ, ಚುನಾವಣೆ ನೇತೃತ್ವ ವಹಿಸಿ ರಮ್ಯಾ ಗೆಲುವಿಗೆ ಕಾರಣರಾಗಿದ್ದರು. ಅಂಬರೀಷ್ ಅವರನ್ನು ಅಂಕಲ್ ಅಂತ ಗೌರವದಿಂದ ಕರೆಯುತ್ತಿದ್ದ ರಮ್ಯಾ ಅವರ ಅಂತಿಮ ದರ್ಶನಕ್ಕೆ ಬಾರದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.

ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ನಿಧನವಾದಾಗಲೂ ರಮ್ಯಾ ಬಂದಿರಲಿಲ್ಲ. ರಮ್ಯಾ ಗೆಲುವಿನಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರ ಪಾತ್ರವೂ ಪ್ರಮುಖ ಕಾರಣವಾಗಿತ್ತು. ಮಾನವೀಯತೆ ಇಲ್ಲದಂತೆ ನಡೆದುಕೊಂಡಿರುವ ರಮ್ಯಾ ವಿರುದ್ಧ ರೈತ ಸಂಘದ ಕಾರ್ಯಕರ್ತರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ

About the author

ಕನ್ನಡ ಟುಡೆ

Leave a Comment