ರಾಜ್ಯ ಸುದ್ದಿ

ಅಂದು ಟಿಪ್ಪು ಕೊಂಡಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಇಂದು ಶಿಲ್ಪಾ ಗಣೇಶ್ ತರಾಟೆ

ಬೆಂಗಳೂರು: ಅಂದು ಸರಣಿ ಟ್ವೀಟ್ ಮೂಲಕ ಟಿಪ್ಪುವನ್ನು ಕೊಂಡಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಟಿಪ್ಪು ಜಯಂತಿಯ ದಿನ ಸಿದ್ದರಾಮಯ್ಯನವರು ಮಾಡಿದ ಟ್ವೀಟ್‌ನ ಸ್ಕ್ರೀನ್‌ಶಾಟ್ ಲಗತ್ತಿಸಿ ಟ್ವೀಟ್ ಮಾಡಿರುವ ಶಿಲ್ಪಾ, ‘ದೇಶ ವಿರೋಧಿ ಘೋಷಣೆ ಕೂಗುವುದು, ದೇಶ ದ್ರೋಹಿಗಳಿಗೆ ಜೈಕಾರಹಾಕುವುದು, ಬೆಂಬಲಿಸುವುದು, ಭಗವದ್ಗೀತೆ ಸುಡುವುದು, ಹಿಂಧೂ ಧರ್ಮ-ದೇವರನ್ನು ಅವಮಾನಿಸುವುದು, ಹಿಂಧೂ ದೇವಾಲಯಗಳನ್ನು ಧ್ವಂಸಮಾಡುವುದು, ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ, ಇತಿಹಾಸವೇ ಹೇಳಿರುವ ಮತಾಂಧನೊಬ್ಬನನ್ನು ಮತಾಂಧ ಎಂದರೆ, ನೀನು ಸಂವಿಧಾನ ವಿರೋಧಿ, ಕೋಮು ಗಲಭೆಯ ಪ್ರಚೋದಕ, ಸಮಾಜ ಘಾತುಕ’ ಎಂದು ಜರಿದಿದ್ದಾರೆ. ‘ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಒಂದು ಸಂಸ್ಥಾನದ ರಾಜ ಎನ್ನುವ ವಾದ ಹುಟ್ಟಿಕೊಂಡಿದೆ. ಇಂತಹ ಮೊಂಡುವಾದದವರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ,ವೀರ ಸಿಂಧೂರ ಲಕ್ಷ್ಮಣ,ರಾಣಿ ಅಬ್ಬಕ್ಕದೇವಿ ಸೇರಿದಂತೆ ಬ್ರಿಟಿಷರ ವಿರುದ್ದ ಹೋರಾಡಿ ಪ್ರಾಣಾರ್ಪಣೆ ಮಾಡಿದವರನ್ನು ಯಾವ ಗುಂಪಿಗೆ ಸೇರಿಸುತ್ತಾರೆ?’ ಎಂದು ಪ್ರಶ್ನಿಸಿ ಸಿದ್ದರಾಮಯ್ಯ ಟೀಟ್ ಮಾಡಿದ್ದರು.

About the author

ಕನ್ನಡ ಟುಡೆ

Leave a Comment