ಸಿನಿ ಸಮಾಚಾರ

ಅಂಬರೀಶ್ ಮಂಡ್ಯದ ಮಗ, ಸುಮಲತಾ ಅವರು ಮಂಡ್ಯ ಸೊಸೆ: ಯಶ್

ಮಂಡ್ಯ: ಅಂಬರೀಶ್ ಮಂಡ್ಯದ ಮಗ, ಸುಮಲತಾ ಅವರು ಮಂಡ್ಯ ಸೊಸೆ,  ಭಾರತದಲ್ಲಿ ಮಂಡ್ಯ ಎಂದು ಬಂದರೆ ಅಲ್ಲಿ ಅಂಬರೀಶ್ ಹೆಸರು ಬಂದೇ ಬರುತ್ತದೆ. ಮಂಡ್ಯ ಜನತೆಯ ಮೇಲೆ ಅವರು ತುಂಬಾ ಪ್ರೀತಿ ಇಟ್ಟುಕೊಂಡಿದ್ದರು ಎಂದು ನಟ ಯಶ್ ಹೇಳಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹಲವು ಹಳ್ಳಿಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪ್ರಚಾರ ನಡೆಸಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ನಮ್ಮ ಜೀವನದಲ್ಲಿ ನಾವು ನಡೆದು ಬಂದ ಹಾದಿಯನ್ನು ಯಾವತ್ತು ಮರೆಯಬಾರದು ಎಂದು ಹೇಳಿದ್ದಾರೆ. ಯಾರು ನಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಿರುತ್ತಾರೆ. ಅಂತಹ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವುದು ನಿಜವಾದ ವ್ಯಕ್ತಿತ್ವವಾಗಿದೆ. ಅಂಬರೀಶ್ ಅಣ್ಣ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ವ್ಯಕ್ತಿ ಎಂದು ಹೇಳಿದರು. ನಾನು ಚಿತ್ರರಂಗಕ್ಕೆ ಬಂದಾಗ,  ಯಾರೂ ನಮ್ಮನ್ನು ಗುರುತಿಸುತ್ತಿರಲಿಲ್ಲ, ಆದರೂ ಅಂಬರೀಶ್ ಅಣ್ಣ  ಗೌರವ ಕೊಟ್ಟು ನಮ್ಮ ಬೆನ್ನು ತಟ್ಟಿದ್ದಾರೆ. ನಮಗೆ ಮಾತ್ರವಲ್ಲ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅದನ್ನು ನೆನಪಿಸಿಕೊಂಡು ನಾನು ಇಂದು ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ ಎಂದರು. ನಂಬರ್ 20 ಕಹಳೆ ಊದುತ್ತಿರುವ ರೈತನ ಗುರುತಿಗೆ ವೋಟ್ ಹಾಕಿ ಎಂದು ಕೈ ಮುಗಿದು ಮತದಾರರ ಬಳಿ ಯಶ್ ಮನವಿ ಮಾಡಿಕೊಂಡರು

About the author

ಕನ್ನಡ ಟುಡೆ

Leave a Comment