ರಾಜ್ಯ ಸುದ್ದಿ

ಅಂಬರೀಷ್ ಅಮರ: ಮಂಡ್ಯದಲ್ಲಿ ಅಂತಿಮದರ್ಶನ ಮುಕ್ತಾಯ

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ಅಂತಿಮ ದರ್ಶನಕ್ಕೆ ಅಭಿಮಾನಿಗಳ ಮಹಾಪೂರವೇ ಹರಿದುಬರುತ್ತಿದೆ. ರಾಜ್ಯ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಭಾನುವಾರ ಬೆಳಗ್ಗೆ 8 ಗಂಟೆಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ 4 ಗಂಟೆಯಿಂದ ಮಂಡ್ಯದಲ್ಲಿ ಲಕ್ಷಾಂತರ ಅಭಿಮಾನಿಗಳು, ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಕಂಠೀರವ ಸ್ಟುಡಿಯೋದಲ್ಲಿ ವರನಟ ಡಾ. ರಾಜ್​ಕುಮಾರ್ ಸಮಾಧಿ ಪಕ್ಕದಲ್ಲೇ ಅಂಬರೀಷ್ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ, ಒಕ್ಕಲಿಗ ಸಂಪ್ರದಾಯದಂತೆ ಸೋಮವಾರ ಮಧ್ಯಾಹ್ನ 2 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಲಿದೆ.

10:26- ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಆಗಮಿಸಿದ ಸೇನಾ ಹೆಲಿಕಾಪ್ಟರ್​.

10:24- ಅಂಬರೀಶ್ ಅಂತ್ಯ ಸಂಸ್ಕಾರದಲ್ಲಿ ಇಡೀ ಸ್ಯಾಂಡಲ್​ವುಡ್ ಭಾಗವಹಿಸಲಿದೆ. ಯಾರ್ಯಾರು ಭಾಗವಹಿಸಲಿದ್ದಾರೆ ಎಂಬ ಪಟ್ಟಿಯನ್ನು ಈಗಾಗಲೇ ಪೊಲೀಸ್​ ಆಯುಕ್ತರಿಗೆ ನೀಡಲಾಗಿದ್ದು, ಭಧ್ರತೆ ದೃಷ್ಟಿಯಿಂದ ಯಾರ್ಯಾರು ಭಾಗವಹಿಸುತ್ತಾರೆ ಎಂಬ ಪಟ್ಟಿಯನ್ನು ಒದಗಿಸಲಾಗಿದೆ. ಪಟ್ಟಿಯಲ್ಲಿರುವಂತೆ ಯಶ್, ಸುದೀಪ್, ದರ್ಶನ್, ಪುನೀತ್ ಉಪೇಂದ್ರ, ಜಗ್ಗೇಶ್, ರವಿಚಂದ್ರನ್, ಪ್ರೇಮಾ, ಸುಧಾರಣಿ, ತಾರಾ, ಧೃವಾ, ಸೇರಿ ಸಾಕಷ್ಟು ತಾರೆಯರು ರೆಬೆಲ್ ಸ್ಟಾರ್ ಅಂತಿಮ ಕ್ಷಣದಲ್ಲಿ ಭಾಗಿಯಾಗಲಿದ್ದಾರೆ.

10:22- ಕೇಂದ್ರದಿಂದ ಸೆಂಟ್ರಲ್ ರಿಸರ್ವ್ ಪೋರ್ಸ್​ನ 3ತುಕಡಿಗಳ ನೇಮಕ. ಒಂದೊಂದು ತಂಡದಲ್ಲಿ 120 ಜನ ಪೋಲೀಸರನ್ನ ನೇಮಕ ಮಾಡಲಾಗಿದೆ. 66 ಮಹಿಳಾ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಸಿಬ್ಬಂದಿ ಭಾಗಿಯಾಗಿದ್ದಾರೆ.

10:20-ಸಾಗರೋಪಾದಿಯಲ್ಲಿ ಕಂಠೀರವ ಸ್ಟುಡಿಯೊದತ್ತ ಹರಿದು ಬರುತ್ತಿರುವ ಅಭಿಮಾನಿಗಳ ದಂಡು. ಅಭಿಮಾನಿಗಳ ತಪಾಸಣೆ ಮಾಡಿ ಒಳಗೆ ಬಿಡುತ್ತಿರುವ ಪೊಲೀಸರು.

10:00- ನಗರದಲ್ಲಿ ದಟ್ಟ ಮಂಜು ಕವಿದ ವಾತಾವರಣ ಹಿನ್ನೆಲೆಯಲ್ಲಿ ಏರ್ ಲಿಫ್ಟ್ ವಿಳಂಬ ಸಾಧ್ಯತೆ. ಇನ್ನೂ ಒಂದು ಗಂಟೆಗಳ ಕಾಲ ಮಂಜು ಕವಿದ ವಾತಾವರಣ ಮುಂದುವರಿಕೆ ಸಾಧ್ಯತೆ.

ಅಂಬಿ ಪಾರ್ಥಿವ ಶರೀರ ಮೆರವಣಿಗೆಯ ಭದ್ರತೆಯ ನೇತೃತ್ವ ವಹಿಸಿಕೊಂಡಿರುವ ಪೊಲೀಸ್​ ಅಧಿಕಾರಿಗಳು

 • ಡಿ ದೇವರಾಜು, ಡಿಸಿಪಿ, ಕೇಂದ್ರ ವಿಭಾಗ
 • ರಾಹುಲ್ ಕುಮಾರ್ ಶಹಾಪುರವಾಡ್, ಡಿಸಿಪಿ, ಪೂರ್ವ ವಿಭಾಗ
 • ಚೇತನ್ ಸಿಂಗ್ ರಾಥೋರ್, ಡಿಸಿಪಿ, ಉತ್ತರ ವಿಭಾಗ
 • ಡಾ.ಬೋರಲಿಂಗಯ್ಯ, ಡಿಸಿಪಿ, ಆಗ್ನೇಯ ವಿಭಾಗ
 • ಕಲಾ ಕೃಷ್ಣಮೂರ್ತಿ, ಡಿಸಿಪಿ, ಈಶಾನ್ಯ ವಿಭಾಗ
 • ಅಬ್ದುಲ್ ಅಹದ್, ಡಿಸಿಪಿ, ವೈಟ್‌ಫೀಲ್ಡ್ ವಿಭಾಗ
 • ಕೆ ಅಣ್ಣಾಮಲೈ, ಡಿಸಿಪಿ, ದಕ್ಷಿಣ ವಿಭಾಗ
 • ರವಿ ಡಿ ಚೆನ್ನಣ್ಣನವರ್, ಡಿಸಿಪಿ, ಪಶ್ಚಿಮ ವಿಭಾಗ
 • ಎಂಎನ್ ಅನುಚೇತ್, ಡಿಸಿಪಿ, ಆಡಳಿತ
 • ಸಾರಾ ಫಾತಿಮ, ಡಿಸಿಪಿ, ಉತ್ತರ ವಿಭಾಗ ಸಂಚಾರ
 • ಡಾ.ಚಂದ್ರಗುಪ್ತ, ಡಿಸಿಪಿ, ಪೂರ್ವ ವಿಭಾಗ ಸಂಚಾರ
 • ಸೌಮ್ಯಲತಾ ಎಸ್‌ಕೆ, ಡಿಸಿಪಿ, ಪಶ್ಚಿಮ ವಿಭಾಗ ಸಂಚಾರ 

About the author

ಕನ್ನಡ ಟುಡೆ

Leave a Comment