ಸಿನಿ ಸಮಾಚಾರ

ಅಂಬಿ ಅಂತಿಮ ಯಾತ್ರೆ: ಸ್ವಲ್ಪಹೊತ್ತಿನಲ್ಲೇ ಕಂಠೀರವ ಸ್ಟುಡಿಯೋ ತಲುಪಲಿರುವ ಪಾರ್ಥಿವ ಶರೀರ

ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿ ವರನಟ ಡಾ. ರಾಜ್​ಕುಮಾರ್ ಸಮಾಧಿ ಪಕ್ಕದಲ್ಲೇ ಅಂಬರೀಷ್ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ, ಒಕ್ಕಲಿಗ ಸಂಪ್ರದಾಯದಂತೆ ಸೋಮವಾರ ಮಧ್ಯಾಹ್ನ 2 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಲಿದೆ.

ರೆಬೆಲ್ ಸ್ಟಾರ್ ಅಂಬರೀಷ್ ಅಂತಿಮ ದರ್ಶನಕ್ಕೆ ಅಭಿಮಾನಿಗಳ ಮಹಾಪೂರವೇ ಕಂಠೀರವ ಸ್ಟೇಡಿಯಂಗೆ ಹರಿದುಬಂದಿತ್ತು. ರಾಜ್ಯ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಭಾನುವಾರ ಬೆಳಗ್ಗೆ 8 ಗಂಟೆಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ 4 ಗಂಟೆಯಿಂದ ಸೋಮವಾರ ಬೆಳಗ್ಗೆ 10 ಗಂಟೆಯವರೆಗೆ ಮಂಡ್ಯದಲ್ಲಿ ಲಕ್ಷಾಂತರ ಅಭಿಮಾನಿಗಳು, ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಅಂತಿಮ ನಮನ ಸಲ್ಲಿಸಿದರು. 

 

03:27PM- ಕಂಠೀರವ ಸ್ಟುಡಿಯೋ ಕಡೆಗೆ ತಿರುಗಿದ ಪಾರ್ಥಿವ ಶರೀರ

03:10PM- ಸ್ವಲ್ಪಹೊತ್ತಿನಲ್ಲೇ ಅಂಬಿ ಪಾರ್ಥಿವ ಶರೀರ ಕಂಠೀರವ ಸ್ಟುಡಿಯೋ ತಲುಪಲಿದೆ.

03:03PM- ಗೊರಗುಂಟೆಪಾಳ್ಯ ತಲುಪಿದ ಅಂಬಿ ಪಾರ್ಥಿವ ಶರೀರ ಮೆರವಣಿಗೆ.

ಕಂಠೀರವ ಸ್ಟುಡಿಯೋಗೆ ಆಗಮಿಸಿ ಚಿತೆಗೆ ಗಂಧದ ಕಟ್ಟಿಗೆ ಇಟ್ಟು ನಮಸ್ಕರಿಸಿದ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ.

ಅಂಬಿ ಚಿತೆಗೆ ಗಂಧದ ಕಟ್ಟಿಗೆ ಇಟ್ಟು ನಮಸ್ಕರಿಸಿದ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ.

About the author

ಕನ್ನಡ ಟುಡೆ

Leave a Comment