ಸಿನಿ ಸಮಾಚಾರ

‘ಅಂಬಿ ನಿಂಗ್ ವಯಸ್ಸಾಯ್ತೊ’ ಚಿತ್ರದಲ್ಲಿ ಸುದೀಪ್ ರೆಟ್ರೊ ಲುಕ್

ಬೆಂಗಳೂರು: ಚೊಚ್ಚಲ ನಿರ್ದೇಶಕ ಗುರುದತ್ತ ನಿರ್ದೇಶನದ ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರ ಹಲವು ಕಾರಣಗಳಿಗೆ ಕುತೂಹಲ ಸೃಷ್ಟಿಸಿದೆ. ಇದರಲ್ಲಿ ಹಿರಿಯ ನಟ ಅಂಬರೀಷ್ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಿದ್ದಾರೆ. ಎರಡನೆಯದಾಗಿ ಸುದೀಪ್ ಅಂಬರೀಷ್ ಅವರ ಯುವಕನ ಪಾತ್ರ ಮಾಡುತ್ತಿದ್ದಾರೆ ಮತ್ತು ಸುಹಾಸಿನಿಯ ಯುವತಿ ಪಾತ್ರವನ್ನು ಶೃತಿ ಹರಿಹರನ್ ನಿರ್ವಹಿಸುತ್ತಿದ್ದಾರೆ. ಚಿತ್ರೀಕರಣ ಕೊನೆಯ ಹಂತದಲ್ಲಿದ್ದು ಕಳೆದ ವಾರ ಸುದೀಪ್ ಮತ್ತು ಶೃತಿ ಹರಿಹರನ್ ಅವರ ಭಾಗದ ಚಿತ್ರೀಕರಣ ನಡೆಯಿತು.

ಚಿತ್ರೀಕರಣ ಸೆಟ್ ನಿಂದ ಸಿಟಿ ಎಕ್ಸ್ ಪ್ರೆಸ್ ಗೆ ಕೆಲವು ಫೋಟೋಗಳು ಸಿಕ್ಕಿವೆ. ಇಲ್ಲಿ ಸುದೀಪ್ ಮತ್ತು ಶೃತಿ ಹರಿಹರನ್ ರೆಟ್ರೊ ನೋಟದಲ್ಲಿ ಕಂಗೊಳಿಸುತ್ತಾರೆ. ಈ ಫೋಟೋಗಳನ್ನು ನೋಡುತ್ತಿದ್ದರೆ ಸುದೀಪ್ ಅವರ ಮೈ ಆಟೋಗ್ರಾಫ್ ಚಿತ್ರ ನೆನಪಾಗುತ್ತದೆ. ಇವರಿಬ್ಬರ ಭಾಗದ ಚಿತ್ರೀಕರಣ ಇನ್ನೆರಡು ದಿನಗಳ ಕಾಲವಿದ್ದು ಮೇ ಮೊದಲ ವಾರದಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ನಂತರ ಕೇರಳದಲ್ಲಿ ಅಂಬರೀಷ್ ಅವರು 6 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಕಿಚ್ಚ ಕ್ರಿಯೇಷನ್ ನಡಿಯಲ್ಲಿ ತಯಾರಾಗುತ್ತಿರುವ ಚಿತ್ರದ ಉಸ್ತುವಾರಿಯನ್ನೆಲ್ಲಾ ಸುದೀಪ್ ನೋಡಿಕೊಳ್ಳುತ್ತಿದ್ದಾರೆ.

 

About the author

ಕನ್ನಡ ಟುಡೆ

Leave a Comment