ರಾಷ್ಟ್ರ

ಅಂಬೇಡ್ಕರರಂತೆ ನಾನೂ ಹಿಂದೂ ಧರ್ಮ ಬಿಡುವೆ: ಮಾಯಾವತಿ

ಅಜಂಗಢ: ಬಿಜೆಪಿ ಮತ್ತು ಆರ್‌ಎಸ್‌ಎಸ್‌ ದೇಶದಲ್ಲಿರುವ ದಲಿತರು, ಬುಡಕಟ್ಟು ಜನರು ಮತ್ತು ಹಿಂದುಳಿದವರ ಬಗೆಗಿನ ತಾರತಮ್ಯ ನೀತಿಯನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಬರುವ ದಿನಗಳಲ್ಲಿ ತಾವೂ ಹಿಂದೂ ಧರ್ಮ ತೊರೆದು ಬೌದ್ಧ ಧರ್ಮ ಸೇರುವುದಾಗಿ ಮಾಯಾವತಿ ಎಚ್ಚರಿಕೆ ನೀಡಿದ್ದಾರೆ.

ಅಜಂಗಢನ ಬಿಎಸ್‌ಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿನ ತಾರತಮ್ಯ ನೀತಿಗೆ ಬೇಸತ್ತು ಅಂಬೇಡ್ಕರ್‌ ಅವರು ಬೌದ್ಧ ಧರ್ಮ ಸೇರಿದರು.

ತಾರತಮ್ಯ ನೀತಿ ಮುಂದುವರೆದಲ್ಲಿ ಅವರಂತೆ ನಾನು ಕೂಡ ಬೌದ್ಧ ಧರ್ಮ ಸೇರುವುದಾಗಿ ಮಾಯಾವತಿ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ಮೌಡ್ಯ ಆಚರಣೆಗಳು ಮತ್ತು ಪೌರೋಹಿತ್ಯಕ್ಕೆ ಬೆಂಬಲ ನೀಡುತ್ತಿದ್ದು, ದಲಿತರು ಮತ್ತು ಹಿಂದುಳಿದವರನ್ನು ಕಡೆಗಣಿಸಲಾಗುತ್ತಿದೆ.

ಇದು ಹೀಗೆಯೇ ಮುಂದುವರೆದರೆ ಬೆಂಬಲಿಗರೊಂದಿಗೆ ಬೌದ್ಧ ಧರ್ಮ ಸೇರುತ್ತೇನೆ ಎಂದು ಮಾಯಾವತಿ ತಿಳಿಸಿದರು.

ಹಿಂದೂ ಧರ್ಮದಲ್ಲಿ ಮೌಡ್ಯ ಆಚರಣೆಗಳನ್ನು ಕೈಬಿಡುವಂತೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಗಡುವು ನೀಡುತ್ತೇನೆ. ಅವರು ವಿಫಲರಾದರೆ ನಾನೂ ಅಂಬೇಡ್ಕರ್‌ ಹಾದಿ ತುಳಿಯುತ್ತೇನೆ ಎಂದು ಮಾಯಾವತಿ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment