ಕ್ರೀಡೆ

ಅಂಬೇಡ್ಕರ್ ವಿರುದ್ಧ ಅವಹೇಳನಾಕಾರಿ ಟ್ವೀಟ್: ಹಾರ್ದಿಕ್ ಪಾಂಡ್ಯ

ರಾಜಸ್ಥಾನ: ರಾಜಸ್ಥಾನದ ಜಾಲೋರ್ ಜಿಲ್ಲೆಯಲ್ಲಿನ ರಾಷ್ಟ್ರೀಯ ಭೀಮ್ ಸೇನೆಯ ಸದಸ್ಯರಾಗಿರುವ ಮೇಘವಾಲ್ ಕ್ರಿಕೆಟ್ ಆಟಗಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಟೀಕಿಸಿ  ಟ್ವೀಟ್ ಮಾಡಿದ್ದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್ಐಆರ್ ದಾಖಲಿಸಲು ಪ.ಜಾತಿ/ಪ.ಪಂಗಡಗಳು ವಿಶೇಷ ನ್ಯಾಯಾಲಯ ಪೋಲೀಸರಿಗೆ ಆದೇಶ ನೀಡಿದೆ.

ಕ್ರಿಕೆಟಿಗ ಪಾಂಡ್ಯ ಡಿಸೆಂಬರ್ 26.2017 ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಕಮೆಂಟ್ ಹಾಕಿಕೊಂಡಿದ್ದಾರೆ. ಇದು ನಮ್ಮ ಸಮುದಾಯದ ಜನರ ಭಾವನೆಗಳನ್ನು ಟೀಕಿಸಿದಂತೆ ಎಂದು ಅರ್ಜಿದಾರರಾದ ಡಿ.ಆರ್. ಮೇಘವಾಲ್ ದೂರಿನಲ್ಲಿ ಹೇಳಿದ್ದಾರೆ.

“ಯಾವ ಅಂಬೇಡ್ಕರ್? ಅಡೆತಡೆ ಇರುವ ಕಾನೂನಿನ ಸಂವಿಧಾನವನ್ನು ರಚಿಸಿದವರು ಅಥವಾ ದೇಶದ ತುಂಬೆಲ್ಲಾ ಮೀಸಲಾತಿ ಎನ್ನುವ ರೋಗ ಹರಡಲು ಕಾರಣರಾದವರೆ?” ಎಂದು ಪಾಂಡ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

About the author

ಕನ್ನಡ ಟುಡೆ

Leave a Comment