ರಾಷ್ಟ್ರ ಸುದ್ದಿ

ಅಗಸ್ಟಾ ಮಧ್ಯವರ್ತಿ ಜತೆ ಗಾಂಧಿ ಕುಟುಂಬಕ್ಕೆ ಆಳದ ನಂಟು: ಅಧ್ಯಕ್ಷ ಅಮಿತ್‌ ಶಾ

ಹೊಸದಿಲ್ಲಿ: ಅಗಸ್ಟಾ ವೆಸ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕೆಲ್‌ ಮತ್ತು ಕಾಂಗ್ರೆಸ್‌ನ ಮುಂಚೂಣಿ ಕುಟುಂಬದ ಜತೆಗಿನ ಸ್ನೇಹ ಸಂಬಂಧದ ಆಳ ನಿರೀಕ್ಷೆಗೂ ನಿಲುಕದಷ್ಟು ಗಾಢವಾಗಿದೆ ಎಂದು ಗಾಂಧಿ ಕುಟುಂಬವನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವಾಗ್ದಾಳಿ ನಡೆಸಿದ್ದಾರೆ. ಅಗಸ್ಟಾ ವೆಸ್ಟ್‌ ಲ್ಯಾಂಡ್‌ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕೆಲ್‌ ಹಲವು ಮಹತ್ವದ ಮಾಹಿತಿಯ ಸುಳಿವು ನೀಡಿದ್ದಾರೆ. ವಿಶೇಷವಾಗಿ ಗಾಂಧಿ ಕುಟುಂಬದ ಬಗೆಗಿನ ಅವರ ಮಾಹಿತಿ ನಿಗೂಢ. ಶ್ರೀಮತಿ ಗಾಂಧಿ ಕುರಿತ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಸಂಬಂಧಿಸಿದ ವಿವರಗಳನ್ನು ಮೈಕೆಲ್‌ ತಮ್ಮ ವಕೀಲರಿಗೆ ರವಾನಿಸಲು ಯಾಕೆ ಯತ್ನಿಸಿದರು ಎನ್ನುವುದು ಯಾರಿಗಾದರೂ ಗೊತ್ತಿದೆಯೇ? ಆತ ಖುದ್ದು ಶ್ರೀಮತಿ ಗಾಂಧಿಗೂ ಆ ವಿವರಗಳನ್ನು ರವಾನಿಸಲು ಬಯಸಿದ್ದನೇ? ಬಯಸಿದ್ದ ಎನ್ನುವುದಾದರೆ ಯಾಕೆ?,” ಎಂದು ಶಾ ಸರಣಿ ಟ್ವೀಟ್‌ಗಳ ಮೂಲಕ ಪ್ರಶ್ನಿಸಿದ್ದಾರೆ. ಮೈಕೆಲ್‌ನಿಂದ ಗುಪ್ತ ಚೀಟಿಯೊಂದು ತಮಗೆ ಬಂದಿರುವುದಾಗಿ ಅವರ ವಕೀಲ ಒಪ್ಪಿಕೊಂಡಿದ್ದಾರೆ. ಆದರೆ, ಅದರಲ್ಲಿನ ಸತ್ಯಾಂಶ ಬಿಚ್ಚಿಡುವ ಬದಲು ಅವರು ‘ಅದು ಔಷಧ ಚೀಟಿ’ ಇರಬಹುದು ಎಂದು ತಾವು ಭಾವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಜನಸಾಮಾನ್ಯರಿಗೆ ನೋವು ನಿವಾರಣೆಯ ಝಂಡು ಬಾಮ್‌, ಟೈಗರ್‌ ಬಾಮ್‌ನಂತಹ ಔಷಧಗಳು ಗೊತ್ತಿವೆ. ಆದರೆ ಇದ್ಯಾವುದು ‘ಫ್ಯಾಮಿಲಿ ಬಾಮ್‌’ ಎಂದು ಮಾರ್ಮಿಕ ಪ್ರಶ್ನೆ ಎತ್ತುವ ಮೂಲಕ ಗಾಂಧಿ ಕುಟುಂಬವನ್ನು ಶಾ ಕೆಣಕಿದ್ದಾರೆ. ಕೋಟ್‌
ಅಗಸ್ಟಾವೆಸ್ಟ್‌ ಲ್ಯಾಂಡ್‌ ಕಮೀಷನ್‌ನ 360 ಕೋಟಿ ರೂ. ಪೈಕಿ 150 ಕೋಟಿ ರೂ. ಕಾಂಗ್ರೆಸ್‌ ನಾಯಕರಿಗೆ ಸಂದಾಯವಾಗಿದೆ. ಕಾಂಗ್ರೆಸ್‌ ಎಂದರೆ ಹಗರಣಗಳ ಪಕ್ಷ. ದೇಶದ ಹಿತ ಬಲಿಕೊಟ್ಟು ಅವರು ಇಂತಹ ಬಾನಗಡಿಯಲ್ಲಿ ತೊಡಗಿದ್ದರು. -ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶ ಮುಖ್ಯಮಂತ್ರಿ

About the author

ಕನ್ನಡ ಟುಡೆ

Leave a Comment