ದೇಶ ವಿದೇಶ

ಅಜರ್‌ ಜಾಗತಿಕ ಉಗ್ರನೆನ್ನಲು ಚೀನಾ ನಿರಾಕಾರ, ಚೀನಾ ಉತ್ಪನ್ನಗಳ ನಿಷೇಧಕ್ಕೆ ನೆಟ್ಟಿಗರ ಒತ್ತಾಯ

ಬೆಂಗಳೂರು: ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸಲು ಹಿಂದೇಟು ಹಾಕುತ್ತಿರುವ ಚೀನಾದ ವಿರುದ್ಧ ಟ್ವೀಟರ್‌ನಲ್ಲಿ #BoycottChinaProducts ಅಭಿಯಾನ ಆರಂಭಗೊಂಡಿದೆ.

ಚೀನಾ ಉತ್ಪನ್ನಗಳನ್ನು ನಿಷೇಧಿಸಬೇಕು ಎಂದು ಟ್ವೀಟಿಗರು ಒತ್ತಾಯಿಸುತ್ತಿದ್ದಾರೆ. ಚೀನಾ ಉತ್ಪನ್ನಗಳಿಗೆ ಅತ್ಯಂತ ದೊಡ್ಡ ಮಾರುಕಟ್ಟೆಯಿರುವುದು ಭಾರತದಲ್ಲಿ. ಒಂದು ವೇಳೆ ಚೀನಾ ಉತ್ಪನ್ನಗಳನ್ನು ನಿಷೇಧಿಸಿದರೆ ಚೀನಾಗೆ ಆರ್ಥಿಕವಾಗಿ ಭಾರಿ ಹೊಡೆತ ಬೀಳಲಿದೆ. ಈಗಾಗಲೇ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಅಮೆರಿಕ, ಫ್ರಾನ್ಸ್‌ ಮತ್ತು ಬ್ರಿಟನ್‌ ರಾಷ್ಟ್ರಗಳು ಫೆಬ್ರವರಿ 27ರಂದೇ ಪ್ರಸ್ತಾವನೆ ಸಲ್ಲಿಸಿವೆ. ಬುಧವಾರ ರಾತ್ರಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಗ್ರರ ಮೇಲೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಈ ವೇಳೆ ಚೀನಾ ಉಗ್ರ ಮಸೂದ್‌ನನ್ನು ಜಾಗತಿಕ ಉಗ್ರನೆಂಬ ಹಣೆಪಟ್ಟಿ ಕಟ್ಟಲು ನಿರುತ್ಸಾಹ ತೋರಿರುವುದು ಬೆಳಕಿಗೆ ಬಂದಿದೆ. ಚೀನಾದ ಈ ಕೃತ್ಯದಿಂದ ಆಕ್ರೋಷಗೊಂಡಿರುವ ಭಾರತೀಯರು ಬಾಯ್‌ಕಾಟ್‌ ಚೀನಾ ಅಭಿಯಾನವನ್ನು ಸಾಮಾಜಿಕ ತಾಣಗಳಲ್ಲಿ ಆರಂಭಿಸಿದ್ದಾರೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌, ಜವಾಬ್ದಾರಿಯುತ ವರ್ತನೆ ತೋರಲು ಚೀನಾ ಬಯಸುತ್ತದೆ ಎಂದು ಹೇಳಿಕೊಂಡಿದ್ದಾರೆ.

About the author

ಕನ್ನಡ ಟುಡೆ

Leave a Comment