ಕ್ರೀಡೆ

ಅಝ್ಲಾನ್ ಷಾ ಹಾಕಿ: ಕೆನಡಾವನ್ನು ಮಣಿಸಿದ ಭಾರತ ಫೈನಲ್‌ಗೆ ಲಗ್ಗೆ

ಐಫಾ: ಬುಧವಾರ ನಡೆದ ಸುಲ್ತಾನ್ ಅಝ್ಲಾನ್ ಷಾ ಕಪ್ ಹಾಕಿ ಟೂರ್ನಮೆಂಟ್ ಪಂದ್ಯಾವಳಿಯಲ್ಲಿ ಭಾರತ ಕೆನಡಾ ವಿರುದ್ಧ 7-3 ಗೋಲುಗಳಿಂದ ಜಯ ಸಾಧಿಸಿದೆ. ಈ ಜಯದೊಡನೆ ಭಾರತ ಪಂದ್ಯಾವಳಿಯ ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. 24 ರ ಹರೆಯದ ಮಂದೀಪ್ ಮೂರು ತ್ವರಿತ ಗೋಲು ದಾಖಲಿಸಿ ಭಾರತಕ್ಕೆ ಪ್ರಾರಂಭಿಕ ಮುನ್ನಡೆ ದೊರಕಿಸಿಕೊಟ್ಟರು 20, 27 ಮತ್ತು 29 ನಿಮಿಷಗಳಲ್ಲಿ ಅವರು ಗೋಲು ದಾಖಲಿಸಿದ್ದರು. ಭಾರತದ ಇನ್ನೋರ್ವ ಆಟಗಾರ ವರುಣ್ ಕುಮಾರ್ ಅವರು 12 ನೇ ನಿಮಿಷದಲ್ಲಿ ಗೋಲು ಗಳಿಸಿಕೊಂಡಿದ್ದು ಈ ಮೂಲಕ ಪಂದ್ಯಾವಳಿಯ ಅರ್ಧ ವಿರಾಮದ ವೇಳೆಗೆ ಭಾರತ 4-0 ಮುನ್ನಡೆ ಸಾಧಿಸಿತು. ಇನ್ನು ಅಮಿತ್ ರೋಹಿದಾಸ್ (39ನೇ ನಿಮಿಷ), ವಿವೇಕ್ ಪ್ರಸಾದ್ (55ನೇ ನಿಮಿಷ), ನೀಲಕಂಠ ಶರ್ಮ (58ನೇ ನಿಮಿಷ) ದಲ್ಲಿ ಭಾರತ ಪರ ಗೋಲು ಗಳಿಸಿ ಭಾರತದ ಒಟ್ಟಾರೆ ಗೋಲಿನ ಸಂಖ್ಯೆಯನ್ನು ಏಳಕ್ಕೆ ಹೆಚ್ಚಿಸಿದ್ದಾರೆ. ಕೆನಡಾ ಪರವಾಗಿ ಫಿನ್ ಬೂತ್ರೋಯ್ಡ್ (50ನೇ ನಿಮಿಷ), ಜೇಮ್ಸ್ ವ್ಯಾಲೆನ್ಸ್ (57ನೇ ನಿಮಿಷ) ಗಳಲ್ಲಿ ಎರಡು ಗೋಲುಗಳನ್ನು ದಾಖಲಿಸಿದ್ದರು. ಈ ಗೆಲುವಿನೊಡನೆ ಭಾರತ 10 ಅಂಕಗಳೋಡನೆ ಅಗ್ರ ಪಟ್ಟವನ್ನಲಂಕರಿಸಿದೆ. ಇನ್ನು ಮಾರ್ಚ್ 30ರಂದು ನಡೆಯುವ ಫೈನಲ್ ಹಣಾಹಣಿಯಲ್ಲಿ ಭಾರತ ಪೋಲ್ಯಾಂಡ್ ಅನ್ನು ಎದುರಿಸಿಅಲಿದೆ.

About the author

ಕನ್ನಡ ಟುಡೆ

Leave a Comment