ಕ್ರೀಡೆ

ಅಝ್ಲಾನ್ ಷಾ ಹಾಕಿ: ಪೋಲೆಂಡ್ ವಿರುದ್ಧ ಭಾರತಕ್ಕೆ 10-0 ಅಂತರದ ಭರ್ಜರಿ ಜಯ

ಐಫಾ: ಅದ್ಭುತ ಫಾರ್ಮ್ ಮೂಲಕ ಅಝ್ಲಾನ್ ಶಾ ಹಾಕಿ ಪಂದ್ಯಾವಳ್ಳಿಯ ಫೈನಲ್ಸ್ ತಲುಪಿರುವ ಮಂದೀಪ್ ಪಡೆ ಶುಕ್ರವಾರ ನಡೆದ ಕಡೆಯ ಲೀಗ್ ಪಂದ್ಯದಲ್ಲಿ ಪೊಲೆಂಡ್ ವಿರುದ್ಧ 10-0 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಮಲೇಷಿಯಾದಲ್ಲಿ ನಡೆಯುತ್ತಿರುಇವ ಮಂದೀಪ್ ಸಿಂಗ್ ಅವಳಿ ಗೋಲುಗಳನ್ನು ದಾಖಲಿಸಿ ಗಮನ ಸೆಳೆದರು.ಪಂದ್ಯದ ಪ್ರಥಮಾರ್ಧದಲ್ಲಿ ಆರು ಹಾಗೂ ದ್ವಿತೀಯಾರ್ಧದಲ್ಲಿ ನಾಲ್ಕು ಗೋಲು ಗಳಿಸಿದ ಭಾರತ ಎದುರಾಳಿ ಪೋಲೆಂಡ್ ಗೆ ಒಂದೂ ಗೋಲು ಗಳಿಸುವ ಅವಕಾಶವನ್ನೇ ನೀಡಲಿಲ್ಲ.
ಮಂದೀಪ್ ಸಿಂಗ್ 50, 51ನೇ ನಿಮಿಷಗಳಲ್ಲಿ ಗೋಲು ಗಳಿಸಿದ್ದರೆ ವರುಣ್ ಕುಮಾರ್ 18 ಹಾಗೂ 25ನೇ ನಿಮಿಷಗಳಲ್ಲಿ ಗೋಲು ದಾಖಲಿಸ್ದ್ದರು. ಇನ್ನು ವಿವೇಕ್ ಸಾಗರ್ ಪ್ರಸಾದ್ (1ನೇ ನಿಮಿಷ), ಸುಮಿತ್ ಕುಮಾರ್ (7ನೇ ನಿಮಿಷ(, ಸುರೇಂದರ್ ಕುಮಾರ್ (19ನೇ ನಿಮಿಷ), ಸಿಮ್ರಾನ್ ಜೀತ್ ಸಿಂಗ್ (29tನೇ ನಿಮಿಷ), ನೀಲಕಂಠ ಶರ್ಮಾ (36ನೇ ನಿಮಿಷ), ಹಾಗೂ ಅಮಿತ್ ರೋಹಿತ್ ದಾಸ್ (55ನೇ ನಿಮಿಷ) ದಲ್ಲಿ ಗೋಲು ದಾಖಲಿಸಿ ಭಾರತದ ಭರ್ಜರಿ ಜಯಕ್ಕೆ ಕಾರಣರಾದರು. ಇದಕ್ಕೆ ಮುನ್ನ ಕೆನಡಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 7-3  ಅಂತರದ ಜಯ ಸಾಧಿಸಿತ್ತು. ಒಟ್ಟಾರೆ ಸರಣಿಯಲ್ಲಿ ಈ ವರೆಗೆ ನಡೆದ ಐದು ಪಂದ್ಯದಲ್ಲಿ ನಾಲ್ಕು ಜಯ, ಒಂದು ಡ್ರಾ ಸಾಧಿಸಿ ಭಾರತ ಫೈನಲ್ ಪ್ರವೇಶಿಸಿದೆ.

ಹಾಕಿ ಪಂದ್ಯಾವಳಿಯ ಫೈನಲ್ಸ್ ಹಣಾಹಣಿ ನಾಳೆ (ಮಾರ್ಚ್ ೩೦) ನಡೆಯಲಿದ್ದು ಪ್ರಶಸ್ತಿಗಾಗಿ ಭಾರತ ಪಡೆ ದ. ಕೊರಿಯಾವನ್ನು ಎದುರಿಸಬೇಕಿದೆ..

About the author

ಕನ್ನಡ ಟುಡೆ

Leave a Comment