ಕ್ರೀಡೆ

ಅಡಿಲೇಡ್ ಟೆಸ್ಟ್: ಅಂಪೈರ್​ ವಿರುದ್ಧ ರಿಕಿ ಪಾಂಟಿಂಗ್ ಕಿಡಿಕಾರಿದ್ದೇಕೆ

ಅಡಿಲೇಡ್: ಅಡಿಲೇಡ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಐತಿಹಾಸಿ ಗೆಲುವು ಸಾಧಿಸಿದ ವಿಚಾರ ಅದೇಕೋ ಆಸಿಸ್ ಮಾಜಿ ಕ್ರಿಕೆಟಿಗರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಣಿಸುತ್ತದೆ.
ಅಡಿಲೇಡ್ ಟೆಸ್ಟ್ ಪಂದ್ಯ ಮುಕ್ತಾಯವಾಗಿ ಪರ್ತ್ ನಲ್ಲಿ ನಡೆಯಲಿರುವ 2ನೇ ಟೆಸ್ಟ್ ನತ್ತ ಎಲ್ಲರ ಚಿತ್ತ ನೆಟ್ಟಿದ್ದರೂ ಆಸಿಸ್ ಮಾಜಿ ಕ್ರಿಕೆಟಿಗರು ಮಾತ್ರ ಇನ್ನೂ ಅಡಿಲೇಡ್ ಟೆಸ್ಟ್ ವಿಚಾರದ ಬಗ್ಗೆ ಇನ್ನೂ ಮಾತನಾಡುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಎಂಬಂತೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಹೊಸ ಸೇರ್ಪಡೆಯಾಗಿದ್ದಾರೆ. ಅಡಿಲೇಡ್ ಟೆಸ್ಟ್ ನಲ್ಲಿ ಅಂಪೈರ್ ಗಳು ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಪಾಂಟಿಂಗ್ ಕಿಡಿಕಾರಿದ್ದಾರೆ. ಮೊದಲ ಪಂದ್ಯದಲ್ಲಿ ಅಂಪೈರ್​ ಕಾರ್ಯವೈಖರಿಗೆ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೋ ಬಾಲ್ ಗಳನ್ನ ಸರಿಯಾಗಿ ಗಮನಿಸದ ಅಂಪೈರ್ ಕುಮಾರ್ ಧರ್ಮಸೇನಾ ವಿರುದ್ಧ ಪಾಂಟಿಂಗ್ ಕಿಡಿಕಾರಿದ್ದಾರೆ. ಅಲ್ಲದೇ ‘ಸುಧೀರ್ಘ ಕಾಲದಿಂದ ಟೆಸ್ಟ್ ಪಂದ್ಯಗಳಲ್ಲಿ ಈ ತಪ್ಪು ನಡೆಯುತ್ತಿದೆ. ಆನ್ ಫೀಲ್ಡ್​ ಅಂಪೈರ್ಸ್​ ಫ್ರಂಟ್ ಲೈನ್​ ನೋ ಬಾಲ್​ ನೋಡೋದೆ ಇಲ್ಲ. ಯುಡಿಆರ್​ಎಸ್​ ಮೂಲಕ ಮಾತ್ರ ಇದು ಬಯಲಾಗುತ್ತೆ. ನಾನು ಇದನ್ನ ಬಹಳ ವರ್ಷಗಳಿಂದ ಹೇಳುತ್ತಿದ್ದೇನೆ’ ಎಂದಿದ್ದಾರೆ.
ಪಂದ್ಯದ ನಾಲ್ಕನೇ ದಿನ ಭಾರತ ನೀಡಿದ 323 ರನ್ ಟಾರ್ಗೆಟ್​ ಬೆನ್ನತ್ತಿದ ಆಸ್ಟ್ರೇಲಿಯಾಗೆ ಮೊದಲ ಓವರ್​ 2ನೇ ಎಸೆತದಲ್ಲೇ ಆಘಾತ ಎದುರಾಯ್ತು. ಇಶಾಂತ್ ಎಸೆದ ಎಸೆತ ಆ್ಯರಾನ್ ಫಿಂಚ್​ ಪ್ಯಾಡ್ ಗೆ ತಗುಲಿದ್ದರಿಂದ ಇಶಾಂತ್ ಔಟ್ ಗಾಗಿ ಮನವಿ ಮಾಡಿದರು. ಫೀಲ್ಡ್ ಅಂಪೈರ್ ಧರ್ಮಸೇನಾ ಹಿಂದೆ ಮಂದೆ ನೋಡದೆ ಕೈ ಎತ್ತಿದ್ರು. ಆದರೆ ಇಶಾಂತ್ ಎಸೆದ ಎಸೆತ ನೋ ಬಾಲ್​ ಆಗಿದ್ದು ಟಿವಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹೀಗಾಗಿ ಫಿಂಚ್ ಬಚಾವಾಗಿದ್ದರು. ಒಂದು ವೇಳೆ ಫಿಂಚ್ ರಿವ್ಯೂ ಪಡೆಯದೇ ಹೋಗಿದ್ದರೆ ಮೊದಲ ಓವರ್ ನಲ್ಲೇ ಪೆವಿಲಿಯನ್​ ಸೇರಬೇಕಾಗುತ್ತಿತ್ತು. ನಂತರ ಅಶ್ವಿನ್ ಎಸೆದ ಹನ್ನೆರಡನೇ ಓವರ್ ನಲ್ಲಿ ಫಿಂಚ್​ ಮತ್ತೊಮ್ಮೆ ಎಲ್ ಬಿಡಬ್ಲೂ ಬಲೆಗೆ ಬಿದಿದ್ದರು.

About the author

ಕನ್ನಡ ಟುಡೆ

Leave a Comment