ರಾಜ್ಯ ಸುದ್ದಿ

ಅತಂತ್ರವಾಗಲಿದೆಯೇ ರಾಜ್ಯ ಬಜೆಟ್

ಬೆಂಗಳೂರು: ರಾಜ್ಯದ ಎಲ್ಲರ ಕಣ್ಣು ಶುಕ್ರವಾರ ಮಂಡನೆಯಾಗುತ್ತಿರುವ ಬಜೆಟ್ ಮೇಲಿದೆ. ಆದರೆ ಕುಮಾರಸ್ವಾಮಿ ನೇತೃತ್ವದ ಸರಕಾರ ಬಜೆಟ್ ಮಂಡಿಸುವುದೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಬಜೆಟ್ ಮಂಡನೆಗೆ ಬಿಜೆಪಿ ಅಡ್ಡಿಪಡಿಸುವ ಸಾಧ್ಯತೆ ಒಂದೆಡೆಯಾದರೆ, ಕಾಂಗ್ರೆಸ್-ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಅತೃಪ್ತಿಗೊಂಡಿರುವ ಬಂಡಾಯ ಶಾಸಕರ ನಡೆಯೂ ಬಜೆಟ್‌ ಮಂಡನೆ ಮತ್ತು ಅಧಿವೇಶನಕ್ಕೆ ಧಕ್ಕೆ ತರುವ ಸಾಧ್ಯತೆಯಿದೆ. ಬಜೆಟ್ ಮಂಡನೆ ವೇಳೆಯೂ 11 ಮಂದಿ ಅತೃಪ್ತರು ಹಾಜರಾಗುವ ಸಾಧ್ಯತೆ ಇಲ್ಲ ಎಂದು ಮಾಧ್ಯಮಗಳು ವಿಶ್ಲೇಷಣೆ ನಡೆಸುತ್ತಿದೆ. ಹೀಗಾಗಿ ದೋಸ್ತಿ ಸರಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಯಾವ ತಂತ್ರ ಹೂಡಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

 

About the author

ಕನ್ನಡ ಟುಡೆ

Leave a Comment