ರಾಜ್ಯ ಸುದ್ದಿ

ಅತಿಥಿ ಉಪನ್ಯಾಸಕರಿಗೆ ಗೌರವಧನ ನಿಗದಿ

ಬೆಂಗಳೂರು: ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಕನಿಷ್ಟ ವೇತನ ನಿಗದಿಪಡಿಸುವಂತೆ ಯುಜಿಸಿ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಪ್ರತಿ ದಿನಕ್ಕೆ 1500 ರೂ. ಅಥವಾ ಮಾಸಿಕ 50ಸಾವಿರ ರೂ. ವೇತನ ನಿಗದಿಪಡಿಸುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಈಗ ಅತಿಥಿ ಉಪನ್ಯಾಸಕರು ಮಾಸಿಕ 9000 ರೂ.ಗಳಿಂದ 12,000 ರೂ. ಗೌರವಧನ ಪಡೆಯುತ್ತಿದ್ದಾರೆ. ಏಳನೇ ವೇತನ ಆಯೋಗದ ಶಿಫಾರಸುಗಳನ್ವಯ ಯುಜಿಸಿಯ 537ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅತಿಥಿ ಉಪನ್ಯಾಸಕರಿಗೆ ಗೌರವಧನ ಹೆಚ್ಚಿಸಬಹುದು ಅಥವಾ ವೇತನ ನಿಗದಿಪಡಿಸಬಹುದು ಎಂಬುದರ ಬಗ್ಗೆ ಯುಜಿಸಿ ಮಾರ್ಗಸೂಚಿಗಳನ್ನೂ ಹೊರಡಿಸಿದೆ. ಅಲ್ಲದ ಮಂಜೂರಿ ಹುದ್ದೆಗಳ ಶೇ 20ರಷ್ಟನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಸಹಾಯಕ ಪ್ರೊಫೆಸರ್‌ಗಳ ನೇಮಕದ ಅರ್ಹತೆಯನ್ನೇ ಪರಿಗಣಿಸಬೇಕು. ಅಲ್ಲದೆ, ಸರಕಾರ ಹಾಗೂ ವಿವಿಯು ನೇಮಕಕ್ಕೆ ತಜ್ಞರ ಪ್ರತ್ಯೇಕ ಸಮಿತಿಗಳನ್ನು ರಚಿಸಬೇಕು ಎಂದು ಯುಜಿಸಿ ಸೂಚಿಸಿದೆ. ಆದರೆ, ಪಿಎಫ್‌ ಅಥವಾ ತುಟ್ಟಿ ಭತ್ಯೆಗೆ ಅರ್ಹರಲ್ಲ ಎಂದೂ ಹೇಳಿದೆ. ಯುಜಿಸಿ ಮಾರ್ಗಸೂಚಿಗಳ ಪ್ರಕಾರ, 2019-20ರ ಶೈಕ್ಷಣಿಕ ವರ್ಷದಿಂದ (ಜೂನ್‌) ಗೌರವ ಧನ ಪರಿಷ್ಕರಿಸಲು ಅಥವಾ ವೇತನ ನಿಗದಿಪಡಿಸಲು ಸರಕಾರ ಕ್ರಮಕೈಗೊಳ್ಳಬೇಕಾಗುತ್ತದೆ.

About the author

ಕನ್ನಡ ಟುಡೆ

Leave a Comment