ರಾಜ್ಯ ಸುದ್ದಿ

ಅತಿವೃಷ್ಟಿ ಪೀಡಿತ ಕೊಡಗಿಗೆ ಕತಾರ್​ ಭಾರತೀಯರಿಂದ 15 ಲಕ್ಷ ರೂ. ದೇಣಿಗೆ

ಬೆಂಗಳೂರು: ಪ್ರವಾಹ ಪೀಡಿತ ಕೇರಳ ಮತ್ತು ಅತಿವೃಷ್ಟಿ ಪೀಡಿತ ಕೊಡಗಿಗೆ ಕತಾರ್​ ದೇಶದಲ್ಲಿರುವ ಭಾರತೀಯರು ಸಹಾಯಹಸ್ತ ಚಾಚಿದ್ದಾರೆ. ಭಾರತೀಯ ಧೂತಾವಾಸದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಮುದಾಯದ ಸೇವಾ ಸಂಸ್ಥೆಯಡಿಯಲ್ಲಿ (ಇಂಡಿಯನ್ ಕಮ್ಯೂನಿಟಿ ಬೇನೆವೋಲೆಂಟ್ ಫೋರಮ್-ICBF) ಕೊಡಗಿನ ಜನರಿಗಾಗಿ 15 ಲಕ್ಷ ರೂ.ದೇಣಿಗೆ ಸಂಗ್ರಹ ಮಾಡಿ ನೀಡಿದ್ದಾರೆ.

ಭಾರತೀಯ ರಾಯಭಾರಿಯಾದ ಪಿ.ಕುಮರನ್​ ಮಾರ್ಗದರ್ಶನದಲ್ಲಿ ದೇಣಿಗೆ ಸಂಗ್ರಹ ಅಭಿಯಾನ ನಡೆದಿತ್ತು. ನ.24ರಂದು ಕತಾರ್​ನಿಂದ ಆಗಮಿಸಿದ್ದ ಐಸಿಬಿಎಫ್​ ಕಾರ್ಯದರ್ಶಿ ಮಹೇಶ್​ಗೌಡ, ಭಾರತೀಯ ಸಾಂಸ್ಕೃತಿಕ ಸಂಸ್ಥೆ ಮಿಲನ್​ ಅರುಣ್​, ಐಸಿಬಿಎಫ್​ ಮತ್ತು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಅರವಿಂದ್​ ಪಾಟೀಲ್​, ಕರ್ನಾಟಕ ಸಂಘದ ಉಪಾಧ್ಯಕ್ಷ ರವಿ ಶೆಟ್ಟಿ, ಕತಾರ್​ನಲ್ಲಿ ಕನ್ನಡ ಚಲನಚಿತ್ರಗಳ ವಿತರಕ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಸೇರಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿ ಮಾಡಿ 15 ಲಕ್ಷ ರೂ.ಚೆಕ್​ ಅನ್ನು ಹಸ್ತಾಂತರಿಸಿದ್ದಾರೆ.
ದೇಣಿಗೆ ಸ್ವೀಕರಿಸಿದ ಎಚ್​.ಡಿ.ಕುಮಾರಸ್ವಾಮಿ, ಕತಾರ್​ನ ಭಾರತೀಯರಿಗೆ ಧನ್ಯವಾದಗಳನ್ನು ತಿಳಿಸಿದರು.

ಸಂತಾಪ: ಕತಾರ್ ಪ್ರತಿನಿಧಿಗಳು ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಸಚಿವ ಹಾಗೂ ನಟ ಅಂಬರೀಷ್, ಹಿರಿಯ ಕಾಂಗ್ರೆಸಿಗ, ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಅವರ ನಿಧನ ಹಾಗೂ ಮಂಡ್ಯ ಬಸ್ ದುರ್ಘಟನೆಯಲ್ಲಿ ಮಡಿದವರಿಗೆ ಸಂತಾಪ ವ್ಯಕ್ತಪಡಿಸಿದರು.

About the author

ಕನ್ನಡ ಟುಡೆ

Leave a Comment