ತಂತ್ರಜ್ಞಾನ

ಅತಿ ಕಡಿಮೆ ಬೆಲೆಗೆ ಕೂಲ್ ಪ್ಯಾಡ್ ಸ್ಮಾಟ್೯ಫೋನ್!

ಇದೇ ಮೊದಲ ಬಾರಿಗೆ ಕೂಲ್ ಪ್ಯಾಡ್ ಕಂಪನಿಯೂ ಬಿಡುಗಡೆ ಮಾಡುವ ಸ್ಮಾರ್ಟ್‌ಫೋನ್‌ವೊಂದು ಆಫ್‌ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದು, ಅದುವೇ ಇಂದು ಲಾಂಚ್ ಆಗಿರುವ ಕೂಲ್ ಪ್ಯಾಡ್ ನೋಟ್ 5 ಲೈಟ್ C ಸ್ಮಾರ್ಟ್‌ಫೋನ್‌. ಇದು ಕಡಿಮೆ ಬೆಲೆಗೆ ದೊರೆಯುತ್ತಿರುವ ಅತೀ ಬೆಸ್ಟ್ ಫೋನ್ ಇದಾಗಿದೆ.

ಈ ಸ್ಮಾರ್ಟ್‌ಫೋನ್ ಒಟ್ಟು ಮೂರು ಸಾವಿರ ಶಾಪ್‌ಗಳಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಫೋನಿನ ಬೆಲೆ ರೂ. 7,777 ಆಗಿದ್ದು, ಒಟ್ಟು ಎರಡು ಬಣ್ಣಗಳಲ್ಲಿದ್ದು, ಗ್ರೇ ಮತ್ತು ಗೋಲ್ಡ್ ಬಣ್ಣದಲ್ಲಿ ಈ ಫೋನ್ ದೊರೆಯಲಿದೆ.
ಬಜೆಟ್ ಬೆಲೆಯಲ್ಲಿ ದೊರೆಯುತ್ತಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ 5 ಇಂಚಿನ HD ಸ್ಕ್ರಿನ್ ಇದ್ದು ಗೇಮ್ ಆಡಲು ಮತ್ತು ವಿಡಿಯೋ ನೋಡಲು ಇದು ಸಹಾಯಕವಾಗಿದೆ.
ಇದೊಂದಿಗೆ ವೇಗದ ಕಾರ್ಯಚರಣೆಗಾಗಿ 1.1 GHz ಸ್ನಾಪ್‌ಡ್ರಾಗನ್ 210 ಕ್ವಾಡ್ ಕೋರ್ ಪ್ರೋಸೆಸರ್ ಇದರಲ್ಲಿದೆ. 2GB RAM ಮತ್ತು 16 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದು. ಅಲ್ಲದೇ 64 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.

8 MP ಕ್ಯಾಮೆರಾವನ್ನು ಈ ಫೋನಿನ ಹಿಂಭಾಗದಲ್ಲಿ ಕಾಣಬಹುದಾಗಿದೆ, ಅಲ್ಲದೇ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ 2500 mAh ಬ್ಯಾಟರಿಯನ್ನು ನೀಡಲಾಗಿದ್ದು, 4G LET ಫೋರ್ಟ್ ಮಾಡಲಿದೆ.
ಈ ಸ್ಮಾರ್ಟ್‌ಫೋನ್‌ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದು, ಅದನ್ನು ಹಿಂಭಾಗದ ಕ್ಯಾಮೆರಾದ ಹಿಂಭಾಗದಲ್ಲಿ ನೀಡಲಾಗಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 7.1ನಲ್ಲಿ ಕಾರ್ಯನಿರ್ವಹಿಸಲಿದೆ.

ಈಗಾಗಲೇ ಈ ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಆಗಸ್ಟ್ 20 ರಿಂದ ಈ ಸ್ಮಾರ್ಟ್‌ಫೋನ್ ಆಫ್‌ಲೈನ್ ಮಾರುಕಟ್ಟೆಯಲ್ಲಿ ದೊರೆಯಲಿದೆ ಎನ್ನಲಾಗಿದೆ. ಇದು ಆಫ್‌ಲೈನ್ ಮಾರುಕಟ್ಟೆಯಲ್ಲಿ ಮಾತ್ರವೇ ದೊರೆಯಲಿದೆ. ಆನ್‌ಲೈನಿನಲ್ಲಿ ಇದು ದೊರೆಯುವುದಿಲ್ಲ.

About the author

ಕನ್ನಡ ಟುಡೆ

Leave a Comment