ರಾಜಕೀಯ

ಅತೃಪ್ತರ ಬೇಡಿಕೆ ಈಡೇರಿಸುವ ಭರವಸೆ: 18ರಂದು ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್

ನವದೆಹಲಿ: ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆಯಲ್ಲಿ  ಸ್ಥಾನ ಸಿಗದೇ ಅವಕಾಶ ವಂಚಿತರಾಗಿರುವ ಶಾಸಕರನ್ನು ಸೆಳೆಯಲು ಒಂದೆಡೆ ಬಿಜೆಪಿ ಪ್ರಯತ್ನಿಸುತ್ತಿದೆ, ಇದರ ಜೊತೆಗೆ ಕಳೆದ 7 ತಿಂಗಳಿಂದ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದ ಇಬ್ಬರು ಪಕ್ಷೇತರರು ತಮ್ಮ ಬೆಂಬಲ ವಾಪಸ್ ತೆಗೆದುಕೊಂಡಿದ್ದಾರೆ,
ಇನ್ನೂ ಬಿಜೆಪಿಯ ಆಪರೇಷನ್ ಕಮಲದಿಂದ ಭಯಭೀತರಾಗಿರುವ ಕಾಂಗ್ರೆಸ್ ಜನವರಿ 18 ರಂದು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ, ಅಸಮಾಧಾನಿತರು ಸೇರಿದಂತೆ ಎಲ್ಲಾ ಶಾಸಕರು ಕಡ್ಡಯವಾಗಿ ಹಾಜರಾಗುವಂತೆ ಸೂಚಿಸಿದ್ದಾರೆ. ಪಕ್ಷದಿಂದ ಹೊರಗಿರುವ ಶಾಸಕರು ಮರಳಿ ಬರಬೇಕುಪ, ಮುಂದಿನ ಸಂಪುಟ ವಿಸ್ತರಣೆಯಲ್ಲಿ ಖಂಡಿತವಾಗಿಯೂ ಸ್ಥಾನ ನೀಡುತ್ತೇವೆ, ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ನಿಮ್ಮ ಕುಂದು ಕೊರತೆಗಳನ್ನು ಆಲಿಸುತ್ತಾರೆ, ನಿಮಗೆ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಖಂಡಿತವಾಗಿಯೂ ಅವಕಾಶ ನೀಡಲಾಗುತ್ತದೆ ಸಂಸದ ಕೆ.ಎಚ್ ಮುನಿಯಪ್ಪ ಭರವಸೆ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರ ಸ್ಥಿರವಾಗಿದೆ, 120 ಶಾಸಕರು ತಮ್ಮೊಂದಿಗಿದ್ದಾರೆ, ತಮಗೆ ಬೆಂಬಲ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ, ಯಡಿಯೂರಪ್ಪ ವಿಫಲಯತ್ನ ಮಾಡುತ್ತಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ. ಇನ್ನೂ ಹರ್ಯಾಣ ಪ್ರದೇಶ ಕಾಂಗ್ರೆಸ್ ಸಮಿತಿ ಗುರುಗಾವ್ ನಲ್ಲಿ ಬಿಜೆಪಿ ಶಾಸಕರು ತಂಗಿರುವ  ಐಟಿಸಿ ಗ್ರಾಂಡ್ ಭಾರತ್ ಪಂಚತಾರಾ ಹೊಟೇಲ್ ಮುಂದೆ ಪ್ರತಿಭಟನೆ ನಡೆಸಿದರು. ಬಿಜೆಪಿ ಸಂವಿಧಾನವನ್ನು ಆಗೌರವದಿಂದ ಕಾಣುತ್ತಿದ್ದು, ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

About the author

ಕನ್ನಡ ಟುಡೆ

Leave a Comment