ಕ್ರೈಂ ರಾಷ್ಟ್ರ

ಅತ್ಯಾಚಾರಿ ರಾಮರಹೀಂ ಗೆ ಹತ್ತು ವರ್ಷ ಜೈಲು ಶಿಕ್ಷೆ

ಚಂಢೀಗಡ: ಹದಿನೈದು ವರ್ಷಗಳ ಹಿಂದೆ ಇಬ್ಬರು ಸಾಧ್ವಿಯವರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಅಪರಾಧಿ ಎಂದು ಘೋಷಿತನಾದ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಬಾಬಾ ಗುರ್‍ಮೀತ್ ರಾಮ್‍ರಹೀಂ ಸಿಂಗ್‍ನ ಶಿಕ್ಷೆಯ ಪ್ರಮಾಣ ಘೋಷಣೆ ಹಿನ್ನೆಲೆಯಲ್ಲಿ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿತ್ತು. ಹಿಂಸಾಚಾರಕ್ಕೆ ಇಳಿಯುವವರ ವಿರುದ್ಧ ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಿಲಾಗಿದೆ.

ಬಾಬಾ ಬಂಧಿಯಾಗಿರುವ ರೋಹ್ಟಕ್ ಜಿಲ್ಲಾ ಜೈಲಿನ ಸುತ್ತಮುತ್ತ ಪೊಲೀಸ್ ಮತ್ತು ಸೇನಾಪಡೆ ಸರ್ಪಗಾವಲು ಹಾಕಲಾಗಿದೆ. ಬಾಬಾ ಅನುಯಾಯಿಗಳು ಯಾವುದೇ ಕಾರಣಕ್ಕೂ ಹಿಂಸಾಕೃತ್ಯಗಳನ್ನು ನಡೆಸದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಸಿಂಗ್‍ನನ್ನು ಅಪರಾಧಿ ಎಂದು ಘೋಷಿಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ರೋಹ್ಟಕ್ ಜಿಲ್ಲಾ ಜೈಲಿಗೆ ಆಗಮಿಸಿ ವಿಚಾರಣೆ ನಡೆಸಿ ಶಿಕ್ಷೆಯ ಪ್ರಮಾಣ ಘೋಷಣೆ ಹಿನ್ನೆಲೆಯಲ್ಲಿ ವಿಶೇಷ ಭದ್ತತಾ ಏರ್ಪಾಡುಗಳನ್ನು ಮಾಡಲಾಗಿತ್ತು.

ಪಂಚಕುಲಾದಲ್ಲಿ ಅಪರಾಧಿ ಎಂದು ಘೋಷಿತನಾಗಿದ್ದ ಬಾಬಾನನ್ನು ಶುಕ್ರವಾರವೇ ರೋಟಕ್ ಜೈಲಿಗೆ ತರಲಾಗಿತ್ತು. ಆತನನ್ನು ಮತ್ತೆ ಪಂಚಕುಲಾ ನ್ಯಾಯಾಲಯಕ್ಕೆ ಕರೆ ತಂದರೆ ಮತ್ತಷ್ಟು ಹಿಂಸೆ ಭುಗಿಲೇಳಬಹುದು ಎಂಬ ಕಾರಣಕ್ಕಾಗಿ ನ್ಯಾಯಾಧೀಶರೇ ಜಿಲ್ಲಾ ಜೈಲಿಗೆ ಹೋಗಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವಂತೆ ಪಂಬಾಜ್ ಮತ್ತು ಹರಿಯಾಣ ಹೈಕೋರ್ಟ್ ಸೂಚಿಸಿದೆ.

ಬಾಬಾನ ಶಿಕ್ಷೆ ಪ್ರಮಾಣ ಘೋಷಣೆ ಹಿನ್ನೆಲೆಯಲ್ಲಿ ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಭಾರೀ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.
ಅತ್ಯಾಚಾರ ಪ್ರಕರಣದಲ್ಲಿ ಬಾಬಾ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಘೋಷಿಸುತ್ತಿದ್ದಂತೆ ಹರಿಯಾಣದ ಸಿರ್ಸಾ, ಪಂಚಕುಲಾ ಸೇರಿದಂತೆ ವಿವಿಧೆಡೆ ಡೇರಾ ಬೆಂಬಲಿಗರು ಭಾರೀ ಹಿಂಸಾಚಾರ ನಡೆಸಿದರು. ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದರು. ವ್ಯಾಪಕ ಹಿಂಸಾಚಾರ ಮತ್ತು ಗೋಲಿಬಾರ್‍ನಲ್ಲಿ 37 ಮಂದಿ ಮೃತಪಟ್ಟು, 400ಕ್ಕೂ ಹೆಚ್ಚು ಜನರು ಗಾಯಗೊಂಡರು. ಬಾಬಾ ಭಕ್ತರ ಆಕ್ರೋಶಕ್ಕೆ ಅನೇಕ ವಾಹನಗಳು ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳು ಬೆಂಕಿಗಾಹುತಿಯಾದವು.

ಗಲಭೆಗೆ ಸಂಬಂಧಿಸಿದಂತೆ 600ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡರು. ಅಲ್ಲದೇ ಹರಿಯಾಣ ಮತ್ತು ಪಂಜಾಬ್‍ನಲ್ಲಿರುವ ಹಲವು ಡೇರಾ ಧಾರ್ಮಿಕ ಕೇಂದ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.

About the author

ಕನ್ನಡ ಟುಡೆ

Leave a Comment