ರಾಷ್ಟ್ರ ಸುದ್ದಿ

ಅನಂತ್ ಕುಮಾರ್ ವಿಧಿವಶ: ಸದಾನಂದ ಗೌಡ ಕೈಗೆ ರಸಗೊಬ್ಬರ ಖಾತೆ

ನವದೆಹಲಿ: ಕೇಂದ್ರ ಸಚಿವ ಮತ್ತು ಕರ್ನಾಟಕ ಬಿಜೆಪಿ ನಾಯಕ ಅನಂತ್ ಕುಮಾರ್ ನಿಧನವಾದ ಹಿನ್ನೆಲೆಯಲ್ಲಿ ಅವರು ನಿರ್ವಹಿಸುತ್ತಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಹೊಣೆ ಇನ್ನೋರ್ವ ಕೇಂದ್ರ ಸಚಿವ, ಕರ್ನಾಟಕದವರೇ ಆದ ಡಿ ವಿ ಸದಾನಂದ ಗೌಡ ಪಾಲಾಗಿದೆ.
ಸದಾನಂದ ಗೌಡ ಪ್ರಸ್ತುತ ಅಂಕಿಅಂಶ ಹಾಗೂ ಕಾರ್ಯಾನುಷ್ಠಾನ ಇಲಾಖೆ ನಿರ್ವಹಣೆ ಮಾಡುತ್ತಿದ್ದು  ಇದೀಗ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ. ಇದೇ ವೇಳೆ ಇನ್ನೊಬ್ಬ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಸಹ ಸಚಿವಾಲಯ ಹಾಗೂ ಸಂಸದೀಯ ವ್ಯವಹಾರಗಳ ಕಾತೆ ಹೆಚ್ಚುವರಿ ಹೊಣೆಗಾರಿಕೆ ಲಭಿಸಿದೆ. ತೋಮರ್ ಇದೀಗ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಗಣಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇಂದ್ರ ಸಚಿವರಾಗಿದ್ದ ಕರ್ನಾಟಕ ಬಿಜೆಪಿ ನಾಯಕ, ದಕ್ಷಿಣ ಬೆಂಗಳೂರಿನ ಸಂಸದ ಅನಂತ್ ಕುಮಾರ್ ಸೋಮವಾರ ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.

About the author

ಕನ್ನಡ ಟುಡೆ

Leave a Comment