ರಾಜ್ಯ ಸುದ್ದಿ

ಅನಾಥ ಹೆಣ್ಣುಮಗುವಿಗೆ ಎದೆಹಾಲು ಉಣಿಸಿ ಮಾನವೀಯತೆ ಮೆರೆದ ಪೊಲೀಸ್ ಪೇದೆ

ಬೆಂಗಳೂರು: ಅನಾಥ ಹೆಣ್ಣುಮಗುವಿಗೆ ಎದೆಹಾಲು ಉಣಿಸಿದ ಪೊಲೀಸ್​ ಪೇದೆ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಿನ್ನೆ ಜಿಕೆವಿಕೆ ಉದ್ಯಾನವನದ ಬಳಿ ಅನಾಥ ಹೆಣ್ಣುಮಗುವೊಂದು ಇತ್ತು. ಅದನ್ನು ನೋಡಿದ ಸಿವಿಲ್​ ರಕ್ಷಣಾ ಸಿಬ್ಬಂದಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆ ಮಗು ಹಾಲು, ಗ್ಲುಕೋಸ್​ ಇಲ್ಲದೆ ನಿತ್ರಾಣವಾಗಿತ್ತು. ಅದನ್ನು ನೋಡಿದ ಪೊಲೀಸ್ ಮಹಿಳಾ ಪೇದೆ ಸಂಗೀತ ಹಳಿಮನಿ ಎದೆಹಾಲು ಉಣಿಸಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಮಗು ಆರೋಗ್ಯವಾಗಿದ್ದು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಗೀತಾ ಯಲಹಂಕ ಠಾಣೆಯ ಪೇದೆಯಾಗಿದ್ದು ಅವರ ಕಾರ್ಯಕ್ಕೆ ಆಸ್ಪತ್ರೆ ಸಿಬ್ಬಂದಿ, ಉನ್ನತ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗುವಿನ ಆರೋಗ್ಯ ಸಂಪೂರ್ಣ ಸುಧಾರಣೆಯಾದ ಬಳಿಕ ಅದನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment