ಸಿನಿ ಸಮಾಚಾರ

ಅನಾರೋಗ್ಯ, ಹಾಸಿಗೆ ಹಿಡಿದ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ

ಮಂಡ್ಯ:  ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ.  ಮಂಡ್ಯ ತಾಲೂಕಿನ ನೊದೇ ಕೊಪ್ಪಲು ಗ್ರಾಮದ ಚನ್ನೇಗೌಡ  ತಿಥಿ ಸಿನಿಮಾ ಮೂಲಕ ಗಡ್ಡಪ್ಪ ಹೆಸರಿನಿಂದ ಪ್ರಸಿದ್ಧಿ ಪಡೆದಿದ್ದಾರೆ.  2016ರಲ್ಲಿ ಪ್ರದೀಪ್ ರೆಡ್ಡಿ ನಿರ್ಮಿಸಿ, ರಾಮ್ ರೆಡ್ಡಿ ನಿರ್ದೇಶಿಸಿದ ತಿಥಿ ಚಿತ್ರದಲ್ಲಿ  ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ಚೆನ್ನೇಗೌಡರ ಸಹಜ ಅಭಿನಯ ಜನರಿಗೆ ಇಷ್ಟವಾಗಿತ್ತು. ಆನಂತರ ಕನ್ನಡ ಚಿತ್ರರಂಗದಲ್ಲಿ ಆಕರ್ಷಣೆಯ ವ್ಯಕ್ತಿಯಾದರಲ್ಲದೇ, ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ತಿಥಿ ನಂತರ ಗಡ್ಡಪ್ಪ ಅಭಿನಯದ ಯಾವ  ಚಿತ್ರವೂ ಗೆಲುವು ಕಾಣಲಿಲ್ಲ, ಅವರ ಬಡತನವು ಕೊನೆಯಾಗಲಿಲ್ಲ. ಮೊದಲು ಹಳ್ಳಿಯಲ್ಲಿಯೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಗಟ್ಟಿಮುಟ್ಟಾಗಿದ್ದ ಚನ್ನೆಗೌಡ , ಈಗ  ಪಾರ್ಶ್ವವಾಯುವಿಗೆ ತುತ್ತಾಗಿ ಅನಾರೋಗ್ಯಕ್ಕೊಳಗಾಗಿ ಹಾಸಿಗೆ ಹಿಡಿದಿದ್ದಾರೆ. ಡಿಸೆಂಬರ್ 24 ರಿಂದ ಮಾತನಾಡುತಿಲ್ಲ.

ಗಡ್ಡಪ್ಪ ಚೆನ್ನಾಗಿದ್ದಾಗ ಬಳಸಿಕೊಂಡ  ಚಿತ್ರರಂಗ ಈಗ ಅವರು ಅನಾರೋಗ್ಯಕ್ಕೀಡಾದಾಗ ಇತ್ತ ತಿರುಗಿಯೂ ನೋಡುತ್ತಿಲ್ಲ. ಹೃದಯ ರೋಗಕ್ಕೆ ಮಂಡ್ಯದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆವು. ಈಗ ನರರೋಗಕ್ಕೆ ಮೈಸೂರು ಆಸ್ಪತ್ರೆಗೆ ತೋರಿಸುತ್ತಿದ್ದೇವೆ. ಆದರೆ, ಕೈಯಲ್ಲಿ ಹಣವಿಲ್ಲ ಚಿತ್ರರಂಗದವರು ಅಪ್ಪನಿಗೆ ಸಹಾಯ ಮಾಡಬೇಕಾಗಿದೆ ಎಂದು ಗಡ್ಡಪ್ಪ ಅವರ ಪುತ್ರಿ ಮನವಿ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment