ಕ್ರೈಂ

ಅಬು ಸಲೇಂ ಆಸೆಗೆ ತಣ್ಣೀರೆರೆಚಿದ ಮುಂಬೈ ಕಮಿಷನರ್

1993ರ ಮುಂಬೈ ಸ್ಫೋಟ ಪ್ರಕರಣದ ಅಪರಾಧಿ ಕುಖ್ಯಾತ ಅಬು ಸಲೇಂ ಆಸೆಗೆ ಮುಂಬೈ ಕಮಿಷನರ್‌ ತಣ್ಣೀರೆರೆಚಿದ್ದಾರೆ. 2ನೇ ಮದುವೆಯಾಗಲು 45 ದಿನಗಳ ಪೆರೋಲ್‌ ಕೋರಿಕೆಯನ್ನು ಪೊಲೀಸ್‌ ಆಯುಕ್ತರು ತಿರಸ್ಕರಿಸಿದ್ದಾರೆ.ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಬು ಸಲೇಂ ತಮ್ಮ ಪ್ರೇಯಸಿ ಸಯೈದ್‌ ಬಾಹರ್‌‌ ಕಸುರ್‌‌ರನ್ನು 2 ನೇ ಮದುವೆಯಾಗಲು ಬಯಸಿದ್ದಾರೆ ಇದ್ದಕ್ಕಾಗೇ ಸಲ್ಲಿಸಿದ್ದ ಪೆರೋಲ್‌ ಅರ್ಜಿ ತಿರಸ್ಕೃತಗೊಂಡಿದೆ. ಮದುವೆಯ ಕನಸಲ್ಲಿದ್ದ ಅಬು ಸಲೇಂ ಸದ್ಯ ತಲೋಜಾ ಜೈಲಿನಲ್ಲಿ ದಿನಗಳನ್ನು ಕಳೆಯಬೇಕಿದೆ. ಮುಂಬೈ ಸ್ಫೋಟದಲ್ಲಿ 257 ಮಂದಿ ಮೃತಪಟ್ಟಿದ್ದು, 713 ಮಂದಿ ಗಾಯಗೊಂಡಿದ್ದರು. ಟಾಡಾ ನ್ಯಾಯಾಲಯ ಅಬು ಸಲೇಂಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

About the author

ಕನ್ನಡ ಟುಡೆ

Leave a Comment