ರಾಷ್ಟ್ರ ಸುದ್ದಿ

ಅಭಿನಂದನ್‌ಗೆ ತೊಂದರೆಯಾದರೆ ಮತ್ತೆ ದಾಳಿ ನಡೆಸುತ್ತೇವೆ: ಪಾಕ್‍ಗೆ ಭಾರತ ಖಡಕ್ ವಾರ್ನಿಂಗ್

ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಅವರಿಗೆ ತೊಂದರೆಯಾದರೆ ದಾಳಿ ನಡೆಸುತ್ತೇವೆ ಎಂದು ಪಾಕಿಸ್ತಾನಕ್ಕೆ ಭಾರತ ಖಡಕ್ ವಾರ್ನಿಂಗ್ ಕೊಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಜತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತುಕತೆಗೆ ಸಿದ್ಧರಾಗಿದ್ದಾರೆ. ಮಾತುಕತೆಗೆ ಮುಂದಾದರೆ ನಾನು ಅಭಿನಂದನ್ ರನ್ನು ಬಿಡುಗಡೆ ಮಾಡುತ್ತೇವೆ ಎಂದು ಪಾಕ್ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯ ಕೂಡಲೇ ಭಾರತೀಯ ಪೈಲಟ್ ರನ್ನು ವಾಪಸ್ ಕಳುಹಿಸಿಕೊಡಬೇಕು. ಇನ್ನು ಪೈಲಟ್ ಬಿಡುಗಡೆಗೆ ಯಾವುದೇ ಷರತ್ತಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಒಂದು ವೇಳೆ ನಮ್ಮ ಪೈಲಟ್ ಗೆ ಏನಾದರೂ ತೊಂದರೆ ಆದರೆ ನಾವು ದಾಳಿ ಮಾಡಲು ಸಿದ್ಧ. ಇನ್ನು ಪಾಕಿಸ್ತಾನ ಉಗ್ರರ ರಕ್ಷಣೆ ಮಾಡುತ್ತಿದೆ. ಕೂಡಲೇ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮಾತ್ರ ಪಾಕ್ ಜೊತೆ ಮಾತುಕತೆಗೆ ನಾವು ಸಿದ್ಧ ಎಂದು ಎಂಇಎ ಹೇಳಿತ್ತು.

About the author

ಕನ್ನಡ ಟುಡೆ

Leave a Comment