ರಾಷ್ಟ್ರ ಸುದ್ದಿ

ಅಭಿನಂದನ್ ಶತ್ರುದೇಶದ ಮುಂದೆ ತಲೆತಗ್ಗಿಸಲ್ಲ; ಆತನ ಬರುವಿಕೆಗೆ ನಾನು ಪ್ರಾರ್ಥಿಸುತ್ತೇನೆ: ತಂದೆ ಭಾವುಕ ನುಡಿ

ನವದೆಹಲಿ: ಗಡಿ ದಾಟಿ ಒಳಬಂದಿದ್ದ ಪಾಕಿಸ್ತಾನದ ಎಫ್-16 ವಿಮಾನವನ್ನು ಹಿಮ್ಮೆಟ್ಟಿಸುವಾಗ ಪತನವಾಗಿದ್ದ ಭಾರತೀಯ ವಾಯುಸೇನೆ ಜೆಟ್ ವಿಂಗ್ ಕಮಾಂಡರ್ ಅಭಿನಂದನ್ ರನ್ನು ಪಾಕಿಸ್ತಾನ ಸೇನೆ ಬಂಧಿಸಿದ್ದು ಆತನ ಬರುವಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ತಂದೆ ಮಾಜಿ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ತಮಾನ್ ಹೇಳಿದ್ದಾರೆ.
ಅಭಿನಂದನ್ ಶತ್ರುದೇಶದ ವಶದಲ್ಲಿರುವುದರಲ್ಲಿ ಭಾರತದಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದೆ. ಇನ್ನು ಅವರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಬೇಕು ಎಂದು ದೇಶಾದ್ಯಂತ ಜನತೆ ಹಾಗೂ ರಾಜಕೀಯ ನಾಯಕರು ಪ್ರಾರ್ಥನೆ ಸಲ್ಲಿಸಿದ್ದಾರೆ. ಭಾರತದ ವಿದೇಶಾಂಗ ಇಲಾಖೆ ಕೂಡ ತತ್ ಕ್ಷಣ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನ ಹೈ ಕಮಿಷನ್ ಗೆ ತಿಳಿಸಿದೆ. ಈ ಮಧ್ಯೆ ದೇಶಾದ್ಯಂತ ವಿಂಗ್ ಕಮಾಂಡರ್ ಮರಳುವಿಕೆಗೆ ಎದುರು ನೋಡುತ್ತಿರುವ ಹೊತ್ತಿನಲ್ಲಿ ಅಭಿನಂದನ್ ತಂದೆ ಜನರಿಗೆ ಧನ್ಯವಾದ ತಿಳಿಸಿದ್ದಾರೆ.
ಅಭಿನಂದನ್ ಕುರಿತು ಭಾರತೀಯರೆಲ್ಲರೂ ತೋರುತ್ತಿರುವ ಕಾಳಜಿಗೆ ಧನ್ಯವಾದಗಳು. ದೇವರು ಅಭಿನಂದನ್ ಮೇಲೆ ಕೃಪೆ ತೋರಿದ್ದು, ಆತ ಜೀವಂತವಾಗಿದ್ದು, ಯಾವುದೇ ಅನಾಹುತ ನಡೆದಿಲ್ಲ. ಪಾಕಿಸ್ತಾನ ಸೇನೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ನನ್ನ ಮಗ ಪಾಕ್ ಮೇಜರ್ ಕೇಳಿದ ಪ್ರಶ್ನೆ ಸಮರ್ಥವಾಗಿ, ಧೈರ್ಯವಾಗಿ ಉತ್ತರಿಸಿದ್ದಾರೆ. ಆತ ನಿಜಕ್ಕೂ ಒಬ್ಬ ಯೋಧ. ನನಗೆ ಅಭಿನಂದನ್ ಬಗ್ಗೆ ಗರ್ವವಿದೆ ಎಂದರು.
ಇನ್ನು ನನಗೆ ಗೊತ್ತು ನಿಮ್ಮೆಲ್ಲಾರ ಆಶೀರ್ವಾದದ ಕೈಗಳು ಆತನ ಮೇಲಿದೆ. ಆತನ ಬಿಡುಗಡೆಗೆ ನೀವೆಲ್ಲಾ ಕೋರುತ್ತಿದ್ದೀರಾ. ಆತನಿಗೆ ಯಾವುದೇ ಹಿಂಸೆಯಾಗದಿರಲಿ ಹಾಗೂ ಸುರಕ್ಷಿತವಾಗಿ ಮರಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಮ್ಮ ಜೊತೆ ನೀವೆಲ್ಲಾ ನಿಂತಿರುವುದಕ್ಕೆ ಧನ್ಯವಾದಗಳು ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment