ಸಿನಿ ಸಮಾಚಾರ

ಅಭಿಷೇಕ್ ಚೊಚ್ಚಲ ಸಿನಿಮಾ “ಅಮರ್” ಗೆ ನಾಗಶೇಖರ್ ನಿರ್ದೇಶನ

ಬೆಂಗಳೂರು: ಅಂಬರೀಷ್ ಪುತ್ರ ಅಭಿಷೇಕ್ ಗೌಡ ಚೊಚ್ಚಲ ಸಿನಿಮಾಗೆ ಸ್ವಲ್ಪ ಬಗ್ಗೆ ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಹೊಸ ವಿಷಯವಾಗಿದೆ. ಸಂದೇಶ್ ಪ್ರೊಡಕ್ಷನ್ ನಲ್ಲಿ ಬರುತ್ತಿರುವ ಅಭಿಷೇಕ್ ಹೊಸ ಸಿನಿಮಾಗೆ ನಾಗಶೇಖರ್ ನಿರ್ದೇಶನ ಮಾಡಲಿದ್ದಾರಂತೆ.

ಈ ಹಿಂದೆ ಪವನ್ ಒಡೆಯರ್, ಚೇತನ್  ಕುಮಾರ್ ನಿರ್ದೇಶನ ಮಾಡುತ್ತಾರೆ ಎಂದು ತಿಳಿದು ಬಂದಿತ್ತು ನಂತರ ಈ ಪ್ರಾಜೆಕ್ಟ್ ಗೆ ನಾಗಶೇಖರ್ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ವಿಷಯದ ಬಗ್ಗೆ ಮಾಹಿತಿ ನೀಡಲು ನಿರ್ದೇಶಕ ನಿರ್ಮಾಪಕರು ಹಾಗೂ ಕಲಾವಿದರು ಸೇರಿದಂತೆ ಯಾರು ಸ್ವಷ್ಟವಾದ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆಯುವವರೆಗೂ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳುತ್ತಾ ಅಧಿಕೃತವಾಗಿ ಎಲ್ಲಾ ವಿಷಯವನ್ನು ಘೋಷಿಸಲಾಗುವುದು ಎಂದು ಹೇಳಿದ್ದಾರೆ. ಅಂಬರೀಷ್-ಸುಮಲತಾ ತಾರಾ ದಂಪತಿ ಪುತ್ರ ಅಭಿಷೇಕ್ ಚೊಚ್ಚಲ ಸಿನಿಮಾ ಎಲ್ಲರಲ್ಲೂ ತುಂಬಾ ಕುತೂಹಲ ಮೂಡಿಸಿದೆ.

 

About the author

ಕನ್ನಡ ಟುಡೆ

Leave a Comment