ಸಿನಿ ಸಮಾಚಾರ

ಅಮರ್ ಚಿತ್ರದಲ್ಲಿ ಅಭಿಷೇಕ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ನಟಿಸುತ್ತಿರುವ ಅಮರ್ ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದು, ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ನಟಿಸಿದ್ದಾರೆ.
ಈಗಾಗಲೇ ದರ್ಶನ್‌ ಹಾಗೂ ಅಭಿಷೇಕ್‌ ಕಾಂಬಿನೇಷನ್‌ನ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ವಿದೇಶದಿಂದ ಮರಳುವ ನಂತರ ಬರುವ ದೃಶ್ಯಗಳನ್ನು ಬೆಳಗ್ಗೆಯಿಂದ ರಾತ್ರಿ 11 ಗಂಟೆವರೆಗೂ ಚಿತ್ರೀಕರಣ ಮಾಡಿದ್ದಾರೆ. ಬೆಂಗಳೂರಿನ ಬೃಹತ್‌ ಬಂಗಲೆ ಹಾಗೂ ದಿ ಕ್ಲಬ್‌ನಲ್ಲಿ ಇದರ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ನಿರ್ದೇಶಕ ನಾಗಶೇಖರ್‌, ತಮ್ಮ ಕತೆಗೆ ತಕ್ಕಂತೆ ದರ್ಶನ್‌ ಪಾತ್ರವನ್ನು ರೂಪಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅಂಬರೀಷ್ ತಮ್ಮ ದೊಡ್ಡ ಮಗ ಎಂದೇ ಕರೆಯುತ್ತಿದ್ದರು,  ದರ್ಶನ್ ಕೂಡ ಅಪ್ಪಾಜಿ ಎಂದು ಸಂಬೋಧಿಸುತ್ತಿದ್ದರು. ದರ್ಶನ್ ಅಂಬರೀಷ್ ಅವರ ಕುಟುಂಬದಲ್ಲಿ ಒಬ್ಬರಾಗಿದ್ದಾರೆ, ಹೀಗಾಗಿ ದರ್ಶನ್  ಅಭಿಷೇಕ್ ಅವರ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಅಮರ್ ಸಿನಿಮಾ ಶೂಟಿಂಗ್ ಅಂತಿಮ ಘಟ್ಟ ತಲುಪಿದ್ದು, ಇನ್ನೊಂದು ವಾರದಲ್ಲಿ ಸಿನಿಮಾ ಶೂಟಿಂಗ್ ಪೂರ್ಣಗೊಳ್ಳಲಿದೆ, ಶೀಘ್ರವೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿ ಆರಂಭವಾಗಲಿದೆ,  ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ದರ್ಶನ್‌ ಗೆಸ್ಟ್‌ ರೋಲ್‌ಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ‘ಚೌಕ’ ಚಿತ್ರದಲ್ಲಿ ನಟಿಸಿದ್ದರು. ಅನಂತರ ಪ್ರಜ್ವಲ್‌ ದೇವರಾಜ್‌ ಅವರಿಗಾಗಿಯೇ ‘ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರದಲ್ಲಿ ಭಗತ್‌ ಸಿಂಗ್‌ ಪಾತ್ರ ಮಾಡಿದ್ದರು. ಈಗ ಅಂಬರೀಶ್‌ ಮೇಲಿನ ಪ್ರೀತಿಗಾಗಿ ‘ಅಮರ್‌’ ಚಿತ್ರದಲ್ಲಿ ಉದ್ಯಮಿ ಪಾತ್ರ ಮಾಡಿದ್ದಾರೆ. ತಂದೆಯ ಅಗಲಿಕೆಯ ನೋವಿನಿಂದ ಚೇರಿಸಿಕೊಂಡು ಶೂಟಿಂಗ್‍ನಲ್ಲಿ ತೊಡಗಿದ್ದ ಅಭಿಷೇಕ್‍ಗೆ ಈಗ ಚಾಲೆಂಜಿಂಗ್ ಸ್ಟಾರ್ ಬಣ್ಣ ಹಚ್ಚಿ ನೋವು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment