ರಾಷ್ಟ್ರ ಸುದ್ದಿ

ಅಮಿತ್ ಶಾಗೆ ಬೀಫ್ ಬಿರಿಯಾನಿ ಪಾರ್ಸೆಲ್ : ಅಸಾದುದ್ದೀನ್ ಓವೈಸಿ

ಹೈದರಾಬಾದ್: ಅಮಿತ್ ಶಾ ಅವರಿಗೆ ಬಿರಿಯಾನಿ ಇಷ್ಟ ಎಂದು ಗೊತ್ತಿರಲಿಲ್ಲ, ಅವರಿಗೆ ಬೀಫ್ ಬಿರಿಯಾನಿ ಕಳುಹಿಸಿಕೊಡುವಂತೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರಿಗೆ ಹೇಳುತ್ತೇನೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಕೆಸಿಆರ್ ತೆಲಂಗಾಣದಲ್ಲಿ ಮುಸ್ಲಿಮರಿಗೆ ಬಿರಿಯಾನಿ ನೀಡುವ ಕುರಿತು ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತಿಯಾಗಿ ಓವೈಸಿ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಯಾರೋ ತಿನ್ನುತ್ತಾರೆ ಎಂದು ನಿಮಗ್ಯಾಕೆ ತಲೆಬಿಸಿ?ನಿಮಗೆ ಸಿಕ್ಕಿಲ್ಲ ಮತ್ಸರವಿದ್ದರೆ, ನಿಮಗೂ ಬೀಫ್ ಬಿರಿಯಾನಿ ಕಳುಹಿಸಿಕೊಡುತ್ತೇವೆ, ನೀವೂ ತಿನ್ನಿ ಎಂದಿದ್ದಾರೆ. ಇದರೊಂದಿಗೆ ಬಿರಿಯಾನಿ ವಿವಾದ ಮತ್ತೆ ಚರ್ಚೆಗೆ ಬಂದಿದ್ದು, ಅಮಿತ್ ಶಾ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿದೆ.

ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಟಾಂಗ್ ನೀಡಿರುವ ಓವೈಸಿ, ಅಂದು ಆಹ್ವಾನವಿಲ್ಲದಿದ್ದರೂ ಪಾಕ್‌ಗೆ ತೆರಳಿ ಪ್ರಧಾನಿ ಕುಟುಂಬದ ಮದುವೆಯಲ್ಲಿ ಪಾಲ್ಗೊಂಡಿರಿ. ಅಲ್ಲಿ ನಿಮಗೆ ಎಂತಹ ಆಹಾರ ನೀಡಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment