ರಾಷ್ಟ್ರ

ಅಮಿತ್ ಶಾ ಬರುತ್ತಿದಂತೆ  ಹೆದ್ದಾರಿ ಬಂದ್‌ ಆ್ಯಂಬುಲೆನ್ಸ್ ಪರದಾಟ  

ಮಂಡ್ಯ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಯಾಣದ ಹಿನ್ನೆಲೆಯಲ್ಲಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದಾಗಿ ಆ್ಯಂಬುಲೆನ್ಸ್ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡುವಂತೆಯಾಗಿದೆ. ಆ್ಯಂಬುಲೆನ್ಸ್ ಮೈಸೂರಿನತ್ತ ಸಾಗುತ್ತಿದ್ದಾಗ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಈ ಘಟನೆ ನಡೆದಿದೆ. ಆ್ಯಂಬುಲೆನ್ಸ್ ಸೈರನ್ ಮಾಡಿದರೂ ವಾಹನ ಚಾಲಕರು ಪೊಲೀಸರು ದಾರಿ ಬಿಡಲಿಲ್ಲ.

ಮುಷ್ಟಿ ಅಕ್ಕಿ ಸಂಗ್ರಹ ಆತ್ಮಹತ್ಯೆ ಮಾಡಿದ ರೈತನ ಮನೆಗೆ ಭೇಟಿ ಚಿನ್ನೇನಹಳ್ಳಿಯ ಐದು ಮನೆಗಳಲ್ಲಿ ಶಾ ಮುಷ್ಟಿ ಅಕ್ಕಿ ಸಂಗ್ರಹಿಸಿದರು. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ರಾಜೇಂದ್ರಪ್ಪ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ರೈತರು ಸಂಕಷ್ಟದಲ್ಲಿ ಇದ್ದಾರೆ. ನೀವು ಕೊಟ್ಟಿರುವ ಅಕ್ಕಿಯಿಂದ ಊಟ ಮಾಡುತ್ತೇವೆ. ನಿಮ್ಮ ಋಣ ನಮ್ಮ ರಕ್ತದಲ್ಲಿ ಸೇರಿಕೊಳ್ಳಬೇಕು. ನಮ್ಮ ಸರಕಾರ ಬಂದಾಗ ರೈತ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ಹೆಚ್ಚು ಆದ್ಯತೆ ನೀಡಲಾಗುವುದು.

ಸಿದ್ದರಾಮಯ್ಯ ಸರಕಾರ ಬಂದ ಮೇಲೆ ರೈತರ ಸಮಸ್ಯೆಗಳು ಹೆಚ್ಚಾಗಿವೆ. ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. 3500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ ಸರಕಾರಗಳು ಇರುವ ಕಡೆ ಆತ್ಮಹತ್ಯೆ ಕಡಿಮೆಯಾಗಿವೆ. ನಾವು ಕಿಸಾನ್ ಮಿತ್ರ ಘೋಷಣಾ ಪತ್ರ ಕೊಡುತ್ತಿದ್ದೇವೆ. ಪ್ರತಿ ರೈತನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಶಾ ಹೇಳಿದರು.

 

About the author

ಕನ್ನಡ ಟುಡೆ

Leave a Comment