ದೇಶ ವಿದೇಶ

ರಾವಣ ದಹನದ ವೇಳೆ ಅಮೃತಸರದಲ್ಲಿ ರೈಲು ದುರಂತ: ಸಂತಾಪ ಸೂಚಿಸಿದ ರಷ್ಯಾ ಅಧ್ಯಕ್ಷ ಪುಟಿನ್

ನವದೆಹಲಿ: ರಾವಣ ದಹನದ ವೇಳೆ ಅಮೃತಸರದಲ್ಲಿ ಸಂಭವಿಸಿದ ರೈಲ್ವೇ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಶನಿವಾರ ತೀವ್ರ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ರಷ್ಯಾ ರಾಯಭಾರಿ ಕಚೇರಿ ಹೇಳಿಕೆ ನೀಡಿದ್ದು, ಅಮೃತಸರ ರೈಲ್ವೇ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ರಾಮನಾಥ್ ಕೋವಿದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿರುವ ಪುಟಿನ್ ಅವರು, ದುರಂತಕ್ಕೆ ಸಂತಾಪ ಸೂಚಿಸಿದ್ದಾರೆಂದು ಹೇಳಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಸಂಭವಿಸಿರುವ ದುರಂತಕ್ಕೆ ತೀವ್ರ ಸಂತಾಪವನ್ನು ಸೂಚಿಸುತ್ತೇನೆ. ದುರ್ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ಸಂತಾಪ ಹಾಗೂ ಗಾಯಾಳುಗಳು ಶೀಘ್ರಗತಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆಂದು ಪುಟಿನ್ ಅವರು ಹೇಳಿದ್ದಾರೆಂದು ರಷ್ಯಾ ರಾಯಭಾರಿ ಕಚೇರಿ ತಿಳಿಸಿದೆ.

About the author

ಕನ್ನಡ ಟುಡೆ

Leave a Comment