ದೇಶ ವಿದೇಶ

ಅಮೆರಿಕದಲ್ಲಿರುವ ರಷ್ಯಾದ 60 ಗುಪ್ತಚರ ಅಧಿಕಾರಿಗಳನ್ನು ಉಚ್ಚಾಟಿಸಿದ ಟ್ರಂಪ್​

ವಾಷಿಂಗ್ಟನ್​: ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಗೂಢಚರ್ಯೆ ನಡೆಸಿದ ಆರೋಪದ ಮೇಲೆ ಅಮೆರಿಕದಲ್ಲಿರುವ ರಷ್ಯಾದ 60 ಗುಪ್ತಚರ ಅಧಿಕಾರಿಗಳನ್ನು ಉಚ್ಚಾಟಿಸಿದ್ದು, ಸಿಯಾಟಲ್​ನಲ್ಲಿರುವ ರಾಜತಾಂತ್ರಿಕ ಕಚೇರಿಯನ್ನು ಮುಚ್ಚುವಂತೆ ಆದೇಶಿಸಿದೆ.

ಅಮೆರಿಕದ ನೌಕಾ ನೆಲೆ ಮತ್ತು ಬೋಯಿಂಗ್​ ಘಟಕದ ಮೇಲೆ ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ರಷ್ಯಾದ ಗುಪ್ತಚರ ಅಧಿಕಾರಗಳನ್ನು ಉಚ್ಚಾಟಿಸಲಾಗಿದೆ. ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ 7 ದಿನಗಳ ಒಳಗಾಗಿ ದೇಶ ತೊರೆಯುವಂತೆ ಹಾಗೂ ಸಿಯಾಟಲ್​ನ ರಾಜತಾಂತ್ರಿಕ ಕಚೇರಿಯನ್ನು ಏಪ್ರಿಲ್​ 2ರ ಒಳಗಾಗಿ ಮುಚ್ಚುವಂತೆ ಟ್ರಂಪ್​ ಆದೇಶಿಸಿದ್ದಾರೆ ಎಂದು ವೈಟ್​ ಹೌಸ್​ನ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಡೆರ್ಸ್​ ತಿಳಿಸಿದ್ದಾರೆ.

ಅಮೆರಿಕದ ನಿರ್ಧಾರದ ಬೆನ್ನಲ್ಲೇ ಕೆನಡಾ ಮತ್ತು ಉಕ್ರೇನ್​ ಸೇರಿದಂತೆ ಹಲವು ಅಮೆರಿಕದ ಮಿತ್ರ ರಾಷ್ಟ್ರಗಳು 100 ಕ್ಕೂ ಹೆಚ್ಚು ರಷ್ಯಾದ ಗುಪ್ತಚರ ಅಧಿಕಾರಿಗಳನ್ನು ಉಚ್ಚಾಟಿಸಿ ಆದೇಶಿಸಿವೆ. ಅಮೆರಿಕ ಉಚ್ಚಾಟಿಸಿರುವ 60 ರಾಜತಾಂತ್ರಿಕ ಅಧಿಕಾರಿಗಳಲ್ಲಿ 48 ಅಧಿಕಾರಿಗಳು ವಾಷಿಂಗ್ಟನ್​ನಲ್ಲಿರುವ ರಷ್ಯಾ ರಾಜತಾಂತ್ರಿಕ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ 12 ಅಧಿಕಾರಿಗಳು ವಿಶ್ವಸಂಸ್ಥೆಯಲ್ಲಿ ನಿಯೋಜಿತರಾಗಿದ್ದಾರೆ.

About the author

ಕನ್ನಡ ಟುಡೆ

Leave a Comment