ದೇಶ ವಿದೇಶ

ಅಮೆರಿಕಾದ ಭಾರತದ ರಾಯಬಾರಿಯಾಗಿ ಹರ್ಷ ವರ್ಧನ್ ಶ್ರಿಂಗ್ಲಾ ನೇಮಕ

ನವದೆಹಲಿ: ಅಮೆರಿಕಾದ ಮುಂದಿನ ಭಾರತದ ರಾಯಬಾರಿಯಾಗಿ ಹರ್ಷವರ್ಧನ್ ಶ್ರಿಂಗ್ಲಾ ಅವರನ್ನು ಇಂದು ನೇಮಕ ಮಾಡಲಾಗಿದೆ. ನವತೇಜ್ ಸರ್ನಾ ಅವರ ಅಧಿಕಾರವಧಿ ಮುಗಿದ ಹಿನ್ನೆಲೆಯಲ್ಲಿ 1984ರ ಬ್ಯಾಚಿನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ ಹರ್ಷವರ್ಧನ್ ಶ್ರಿಂಗ್ಲಾ  ಅವರನ್ನು  ಅಮೆರಿಕಾದ ಮುಂದಿನ ರಾಯಬಾರಿಯಾಗಿ ನೇಮಕ ಮಾಡಲಾಗಿದೆ. ಸದ್ಯದಲ್ಲಿ ಹರ್ಷವರ್ಧನ್ ಶ್ರೀಂಗ್ಲಾ ಕಾರ್ಯಾರಂಭಿಸುವ ಸಾಧ್ಯತೆ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಶ್ರೀಂಗ್ಲಾ ಪ್ರಸ್ತುತ   ಬಾಂಗ್ಲಾದೇಶದ ಹೈಕಮೀಷನರ್ ಆಗಿದ್ದಾರೆ. ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಸಮಿತಿ ಮಹಾನಿರ್ದೇಶಕ  ಗಂಗೂಲಿ ದಾಸ್ ಅವರನ್ನು ಬಾಂಗ್ಲಾದೇಶದ ನೂತನ ಹೈಕಮೀಷನರ್ ಆಗಿ ನೇಮಕ ಮಾಡಲಾಗಿದೆ.

About the author

ಕನ್ನಡ ಟುಡೆ

Leave a Comment