ರಾಷ್ಟ್ರ ಸುದ್ದಿ

ಅಮೇಥಿಯಲ್ಲಿ ರಾಹುಲ್ ಮೇಲೆ ಗನ್ ಪಾಯಿಂಟ್: ಕಾಂಗ್ರೆಸ್ ಕಳವಳ

ಅಮೇಥಿ: ಅಮೇಥಿಯಲ್ಲಿ ನಿನ್ನೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಅವರ ಲೇಸರ್ ಲೈಟ್ ಕಾಣಿಸಿಕೊಂಡಿದ್ದು ಇದು ಗನ್ ಪಾಯಿಂಟ್ ಇರಬಹುದು ಎಂಬ ಆತಂಕವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. ರಾಹುಲ್ ಗಾಂಧಿ ಮೇಲೆ 7 ಬಾರಿ ಹಸಿರು ಲೇಸರ್ ಲೈಟ್ ಕಾಣಿಸಿಕೊಂಡಿದ್ದು ಸ್ನೈಪರ್ ಗನ್ ಪಾಯಿಂಟ್ ಇರಬಹುದು. ಅವರ ಜೀವಕ್ಕೆ ಅಪಾಯವಿರುವ ಸಾಧ್ಯತೆ ಇದೆ. ಹೀಗಾಗಿ ಅವರ ಭದ್ರತೆಯನ್ನು ಹೆಚ್ಚಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ. ಕೂಡಲೇ ಈ ಕುರಿತು ತನಿಖೆಗೆ ಆಗ್ರಹಿಸುವಂತೆ ಕಾಂಗ್ರೆಸ್ ತಮ್ಮ ಮನವಿ ಪತ್ರದಲ್ಲಿ ತಿಳಿಸಿದೆ. ಅಲ್ಲದೆ ರಾಹುಲ್ ಗಾಂಧಿಯ ಪ್ರಚಾರ ಸಭೆಗಳು ಮತ್ತು ರ್ಯಾಲಿಗಳ ಸಂದರ್ಭದಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸುವಂತೆ ಮನವಿ ಮಾಡಿದೆ.

About the author

ಕನ್ನಡ ಟುಡೆ

Leave a Comment