ದೇಶ ವಿದೇಶ

ಅಮೇರಿಕದ ಮಾರ್ಕೋನಿ ಪ್ರಶಸ್ತಿ ಗಳಿಸಿದ ಕನ್ನಡಿಗ ಅರುಣ್ ನೇತ್ರಾವಳಿ

ವಾಷಿಂಗ್ಟನ್; ಅಂಕೋಲ ಮೂಲದ ಅರುಣ್ ನೇತ್ರಾವಳಿಯವರು 2017 ನೇ ಸಾಲಿನ ಡಿಜಿಟಲ್ ಟೀವಿ, ಹೈಡಿಫಿನೇಷನ್ ಟೀವಿ ಮತ್ತು ಸ್ಟ್ರೀಮಿಂಗ್ ವಿಡಿಯೋಗಳಲ್ಲಿ ವ್ಯಾಪಕ ಸಂಶೋಧನೆಗಳ ಮೂಲಕ ಡಿಜಿಟಲ್ ವಿಡಿಯೋ ಕ್ರಾಂತಿಗೆ ಗಣನೀಯ ಕೊಡುಗೆ ನೀಡಿ ಮಾರ್ಕೋನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1967 ರಲ್ಲಿ ಅಮೇರಿಕದ ರೈಸ್ ವಿವಿ ಯಲ್ಲಿ ಡಾಕ್ಟರೇಟ್ ಪದವಿ ಪದೆದಿದ್ದಾರೆ.
ತಮ್ಮ ಸಂಶೋಧನೆಯಿಂದ ಮಾನವ ಜನಾಂಗಕ್ಕೆ ನೀಡಿದ ಕೊಡುಗೆಗಾಗಿ ಅರುಣ್ ರವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮಾರ್ಕೋನಿ ಪ್ರಶಸ್ತಿ ನೀಡುವ ಸಮಿತಿ ಹೇಳೀದೆ.

ಪ್ರಶಸ್ತಿ ಪುರಸ್ಕೃತರಿಗೆ 65 ಲಕ್ಷ ರೂ. ನಗದು ಹಾಗು ಪ್ರಶಸ್ತಿ ಪತ್ರ ಸಿಗಲಿದೆ.
ರೇಡಿಯೋ ಆವಿಷ್ಕರಿಸಿದ ಮಾರ್ಕೋನಿ ಯವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ಮೂಲತಃ ಕನ್ನಡದವರಾದ  ಇವರು ಸದ್ಯ ಅಮೇರಿಕದಲ್ಲಿ ವಾಸವಾಗಿದ್ದಾರೆ.

About the author

ಕನ್ನಡ ಟುಡೆ

Leave a Comment