ದೇಶ ವಿದೇಶ

ಅಮೇರಿಕಾವು ರಷ್ಯಾದ 60 ಗುಪ್ತಚರ ಅಧಿಕಾರಿಗಳನ್ನು ಉಚ್ಚಾಟಿಸಿದೆ.

ವಾಷಿಂಗ್ಟನ್​: ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಗೂಢಚರ್ಯೆ ನಡೆಸಿದ ಆರೋಪದ ಮೇಲೆ ಅಮೆರಿಕದಲ್ಲಿರುವ ರಷ್ಯಾದ 60 ಗುಪ್ತಚರ ಅಧಿಕಾರಿಗಳನ್ನು ಉಚ್ಚಾಟಿಸಿದ್ದು ಸಿಯಾಟಲ್​ನಲ್ಲಿರುವ ರಾಜತಾಂತ್ರಿಕ ಕಚೇರಿಯನ್ನು ಮುಚ್ಚುವಂತೆ ಆದೇಶಿಸಿದೆ.

ಅಮೆರಿಕದ ನೌಕಾ ನೆಲೆ ಮತ್ತು ಬೋಯಿಂಗ್​ ಘಟಕದ ಮೇಲೆ ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ರಷ್ಯಾದ ಗುಪ್ತಚರ ಅಧಿಕಾರಗಳನ್ನು ಉಚ್ಚಾಟಿಸಲಾಗಿದೆ. ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ 7 ದಿನಗಳ ಒಳಗಾಗಿ ದೇಶ ತೊರೆಯುವಂತೆ ಹಾಗೂ ಸಿಯಾಟಲ್​ನ ರಾಜತಾಂತ್ರಿಕ ಕಚೇರಿಯನ್ನು ಏಪ್ರಿಲ್​ 2ರ ಒಳಗಾಗಿ ಮುಚ್ಚುವಂತೆ ಟ್ರಂಪ್​ ಆದೇಶಿಸಿದ್ದಾರೆ ಎಂದು ವೈಟ್​ ಹೌಸ್​ನ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಡೆರ್ಸ್​ ತಿಳಿಸಿದ್ದಾರೆ.

 

.

 

About the author

ಕನ್ನಡ ಟುಡೆ

Leave a Comment