ಸಿನಿ ಸಮಾಚಾರ

ಅಯೋಧ್ಯೆಯನ್ನು ರಾಜಕೀಯ ಪಕ್ಷಗಳು ತಮ್ಮ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಿವೆ: ನಟ ಪ್ರಕಾಶ್ ರೈ

ಬೆಂಗಳೂರು: ವಿವಿಧ ರಾಜಕೀಯ ಪಕ್ಷಗಳು ಅಯೋಧ್ಯೆ ವಿಷಯವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ನಟ ಹಾಗೂ ರಾಜಕಾರಣಿ ಪ್ರಕಾಶ್ ರೈ ಆರೋಪಿಸಿದ್ದಾರೆ.
ಬೆಂಗಳೂರಿನ ಚಿತ್ರಕಲ್ ಪರಿಷತ್ ನಲ್ಲಿ ಆಯೋಜಿಸಿದ್ದ ಅಯೋಧ್ಯೆ ಫೋಟೋ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಪ್ರಕಾಶ್ ರೈ,  ಛಾಯಾಗ್ರಾಹಕ ಸುಧೀರ್ ಶೆಟ್ಟಿ ಅಯೋಧ್ಯೆಯನ್ನು ತುಂಬಾ ವಿಭಿನ್ನವಾಗಿ ಸೆರೆ ಹಿಡಿದಿದ್ದಾರೆ ಎಂದು ಹೇಳಿದ್ದಾರೆ, ಅಯೋಧ್ಯೆಯಲ್ಲಿರುವ ವಿವಿಧ ಸಮುದಾಯಗಳು ಯಾವುದೇ ದ್ವೇಷ ಭಾವನೆ ಇಲ್ಲದೇ ಬದುಕುತ್ತಿದ್ದಾರೆ, ಆದರೆ ಅಯೋಧ್ಯೆ ವಿಷಯವನ್ನು ರಾಜಕೀಯ ಪಕ್ಷಗಳು ಅವುಗಳ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ದೂರಿದ್ದಾರೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಸಂಸತ್ತಿನಲ್ಲಿ ನಾನು ಜನರ ಧ್ವನಿಯಾಗಲು ಬಯಸುತ್ತೇನೆ, ನಾನು ರಾಜಕೀಯಕ್ಕೆ ಬರುತ್ತಿದ್ದು, ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿದ್ದೇನೆ,  ಶೀಘ್ರವೇ ಪ್ರಣಾಳಿಕೆ ರಿಲೀಸ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷ ನನ್ನ ಬೆಂಬಲಕ್ಕೆ ಬರುತ್ತದೆ,ಹಾಗಯೇ ಹಲವು ಮಂದಿ ನನ್ನನ್ನು ಬೆಂಬಲಿಸುತ್ತಾರೆ, ಮುಂಬರುವ ದಿನಗಳಲ್ಲಿ  ಅದನ್ನು ಬಹಿರಂಗ ಪಡಿಸುತ್ತೇನೆ ಎಂದು ತಿಳಿಸಿದ್ದಾರೆ. ಸಮಾಜದಲ್ಲಿ  ಎರಡು ವಿಧವಿದೆ, ಒಂದು ಶ್ರೀಮಂತ ಹಾಗೂ ಬಡ ವರ್ಗ ಇದೆ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡುವುದರಲ್ಲಿ ತಪ್ಪಿಲ್ಲ ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment