ರಾಷ್ಟ್ರ ಸುದ್ದಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ಜಾರಿ ಅಸಾಧ್ಯವಲ್ಲ- ನಿವೃತ್ತ ನ್ಯಾಯಾಧೀಶ ಚೆಲ್ಲಮೇಶ್ವರ್

ಮುಂಬೈ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿವಾದ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವಾಗ ಸರ್ಕಾರ ಕಾನೂನು ಜಾರಿಗೆ ತರುವುದು ಅಸಾಧ್ಯವಲ್ಲ  ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಚೆಲ್ಲಮೇಶ್ವರ್ ಹೇಳಿದ್ದಾರೆ.ರಾಮಮಂದಿರ ನಿರ್ಮಾಣಕ್ಕೆ ಕಾನೂನು ಜಾರಿಗೆ ತರಬೇಕೆಂದು ಸಂಘ ಪರಿಹಾರದಿಂದ ಸರ್ಕಾರದ ಒತ್ತಡ ಹೆಚ್ಚುತ್ತಿರುವಂತೆಯೇ  ಚೆಲ್ಲಮೇಶ್ವರ್ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಚೆಲ್ಲಮೇಶ್ವರ್ ,  ಸರ್ಕಾರ  ಕಾನೂನು ಜಾರಿಗೆ ತರಬಹುದು ಅಥವಾ ಬಿಡಬಹುದು.

ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಸರ್ಕಾರ ಕೈಗೊಂಡ ಪ್ರಕ್ರಿಯೆಗಳಿಂದ ಸುಪ್ರೀಂಕೋರ್ಟ್ ತೀರ್ಪುಗಳು ರದ್ದಾಗಿದ್ದವು ಎಂದರು.ಕಾವೇರಿ ವಿವಾದ ಸಂಬಂಧ ಕರ್ನಾಟಕ ಸರ್ಕಾರದ ಕಾನೂನು ಹಾಗೂ ರಾಜಸ್ತಾನ, ಪಂಜಾಬ್ , ಹರಿಯಾಣ ರಾಜ್ಯಗಳ ನಡುವಿನ ನದಿ ನೀರು ವಿವಾದವನ್ನು ಉದಾಹರಣೆಯನ್ನಾಗಿ ನೀಡಿದ ಚೆಲ್ಲಮೇಶ್ವರ್,  ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಕಾನೂನು ಜಾರಿ ಅಸಾಧ್ಯವಲ್ಲ ಎಂದರು.ಈ ವರ್ಷದ ಆರಂಭದಲ್ಲಿ  ನಿವೃತ್ತ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರ ಕಾರ್ಯವೈಖರಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದ ನಾಲ್ವರು ಹಿರಿಯ ನ್ಯಾಯಾಧೀಶರಲ್ಲಿ ಚೆಲ್ಲಮೇಶ್ವರ್ ಕೂಡಾ ಒಬ್ಬರಾಗಿದ್ದರು.

About the author

ಕನ್ನಡ ಟುಡೆ

Leave a Comment