ರಾಷ್ಟ್ರ ಸುದ್ದಿ

ಅಯೋಧ್ಯೆಯಲ್ಲಿ ರಾಮ ಮಂದಿರ, ಲಖನೌನಲ್ಲಿ ಮಸೀದಿ ನಿರ್ಮಾಣ: ರಾಮ ಜನ್ಮಭೂಮಿ ನ್ಯಾಸ ಅಧ್ಯಕ್ಷ ರಾಮ್ ವಿಲಾಸ್

ನವದೆಹಲಿ: ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಹಾಗೂ ಲಖನೌನಲ್ಲಿ ಮಸೀದಿ ನಿರ್ಮಾಣ ಮಾಡಲಾಗುತ್ತದೆ ಎಂದು ಬಿಜೆಪಿ ಮಾಜಿ ಸಂಸದ ಹಾಗೂ ರಾಮ ಜನ್ಮಭೂಮಿ ನ್ಯಾಸ ಅಧ್ಯಕ್ಷ ರಾಮ್ ವಿಲಾಸ್ ವೇದಾಂತಿಯವರು ಶನಿವಾರ ಹೇಳಿದ್ದಾರೆ.
ಅಯೋಧ್ಯೆ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಡಿಸೆಂಬರ್ ನಿಂದ ಆರಂಭಗೊಳ್ಳಲಿದೆ. ಯಾವುದೇ ಸುಗ್ರೀವಾಜ್ಞೆಗಳಿಲ್ಲದೆಯೇ ಪರಸ್ಪರ ಒಪ್ಪಿಗೆ ಮೂಲಕ  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳುತ್ತದೆ. ಲಖನೌನಲ್ಲಿ ಮಸೀದಿ ನಿರ್ಮಾಣ ಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಈ ಹೇಳಿಕೆ ನೀಡಿದ್ದ ವೇದಾಂತಿಯವರು ಅಯೋಧ್ಯೆ ರಾಮ ಮಂದಿರ ವಿವಾದವನ್ನು ಬಿಜೆಪಿ ಬಗೆಹರಿಸಲಿದೆ. 2019 ಲೋಕಸಭಾ ಚುನಾವಣೆಗೂ ಮುನ್ನವೇ ರಾಮ ಮಂದಿರ ನಿರ್ಮಾಣ ಆರಂಭಗೊಳ್ಳಲಿದೆ ಎಂದು ಹೇಳಿದ್ದರು.

About the author

ಕನ್ನಡ ಟುಡೆ

Leave a Comment