ಕವಿತೆಗಳು

ಅರಳಲಿ ಹೂವು

ಓದುತ್ತಲೇ ಮೈ ಮರೆತು ಹೋದೆ
ನೀನರಿಯೇ ಮನದ ಮಾಯೇ,
ಮೌನಕ್ಕೆ ಸಾವಿರ ಭಾವನೆಗಳು,
ತಡೆಯದೆ ಮೂಡಿಬಂತು
ಹೊಸ ಕಾಮನೆಗಳು

ಉತ್ತರಿಸದಾದೆ ಒತ್ತರಿಸಿ
ಬಂದ ಪ್ರಶ್ನೆಗಳಿಗೆ ,
ಬರಲಿ ಉತ್ತರಿಸುವ ಘಳಿಗೆ,
ಕೇಳದಿರು ಅಡಿಗಡಿಗೆ,
ಹೂವಾಗಿಸುವೆ ಮುಡಿಗೆ
ಸಮಯವು ಬೇಕು ಕೊಡಲು ಕಾಣಿಕೆ,
ತಡೆ ಹಿಡಿಯಬೇಕಿದೆ ಬಯಕೆ

ಅರಿಯ ಬೇಕಿದೆ ಮನವು
ತಿಳಿಯಬೇಕಿದೆ ಒಲವು
ಕಟ್ಟಿ ಕೊಳೆಯುವಂತೆ
ಮಾಡುವುದಲ್ಲ ತನುವು
ನಂಬಿಕೆಯಲ್ಲಿ ಅರಳಬೇಕಿದೆ
ಸುಂದರ ಹೂವು

ಸುರಭಿ ಲತಾ

About the author

ಕನ್ನಡ ಟುಡೆ

1 Comment

Leave a Comment