ದೇಶ ವಿದೇಶ

ಅರುಣ್ ಜೇಟ್ಲಿ ಬಳಿ ಕ್ಷಮಾಪಣೆ ಕೋರಿದ ಅರವಿಂದ್ ಕೇಜ್ರಿವಾಲ್

ನವದೆಹಲಿ : ಕಳೆದ ತಿಂಗಳಷ್ಟೇ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಬಳಿ ಕ್ಷಮೆಯಾಚಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಳಿ ಕ್ಷಮಾಪಣೆ ಕೋರಿದ್ದಾರೆ.

ಮಾನಹಾನಿ ಪ್ರಕರಣವೊಂದರಲ್ಲಿ  ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಳಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರಾದ ಸಂಜಯ್ ಸಿಂಗ್ , ಅಶುತೋಷ್ ಜಂಟಿಯಾಗಿ ಕ್ಷಮಾಪಣೆ ಕೋರಿದ್ದಾರೆ. ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರಾದ ರಾಘವ್ ಚಾಂದಾ, ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್ , ಅಶುತೋಷ್ ಹಾಗೂ ದೀಪಕ್ ಬಾಜ್ ಪೈ ಪೈವಿರುದ್ಧ 10 ಕೋಟಿ ರೂಪಾಯಿಗಳ ಮಾನಹಾನಿ  ಪ್ರಕರಣವನ್ನು ಅರುಣ್ ಜೇಟ್ಲಿ ದಾಖಲಿಸಿದ್ದರು.

 

About the author

ಕನ್ನಡ ಟುಡೆ

Leave a Comment