ಸುದ್ದಿ

ಅಲಮೇಲಮ್ಮ ಶಾಪದಿಂದ ವಿಮುಕ್ತಿಗೊಂಡ ಮೈಸೂರು ರಾಜವಂಶ

ಮೈಸೂರು: ಮೈಸೂರು ರಾಜವಂಶಸ್ಥರಲ್ಲಿ ಇದೀಗ ಸಂತಸ ಮೂಡಿದೆ.ಅಲಮೇಲಮ್ಮ ಶಾಪದಿಂದ ವಿಮುಕ್ತಿಗೊಂಡ  ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ದಂಪತಿಗೆ ಮಕ್ಕಳಾಗುವ ಸಂದರ್ಭ ಬಂದಿದೆ.

ಯದುವೀರ ಅವರು ಪ್ರಮೋದಾದೇವಿ ಒಡೆಯರ್‌ ಅವರ ದತ್ತುಪುತ್ರ. ಅವರ ಪತ್ನಿ ತ್ರಿಷಿಕಾ ಗರ್ಭಧರಿಸಿರುವುದು ಕುಟುಂಬದಲ್ಲಿ ಸಂತಸ ಮೂಡಿಸ ಮೂಡಿಸಿದೆ.

ಜನಪದ ಕಥೆಯೊಂದರ ಪ್ರಕಾರ, ‘ಶ್ರೀರಂಗಪಟ್ಟಣದ ರಾಜ ಶ್ರೀರಂಗರಾಯನ ಪತ್ನಿ ಅಲಮೇಲಮ್ಮನ ಶಾಪದಿಂದಾಗಿ ಒಡೆಯರ್‌ ವಂಶದ ಅರಸರಿಗೆ ಮಕ್ಕಳಾಗುತ್ತಿರಲಿಲ್ಲ. ಈಗ ಕುಟುಂಬದವರು ಮಕ್ಕಳ ಭಾಗ್ಯ ಕಾಣುವಂತಾಗಿದೆ.

ದಸರೆ ವೇಳೆಗೆ ಜನನ: ತ್ರಿಷಿಕಾ ಕುಮಾರಿ ಈಗ 5 ತಿಂಗಳ ಗರ್ಭಿಣಿಯಾಗಿದ್ದಾರೆ. ದಸರೆ ವೇಳೆಗೆ ಮಗು ಜನಿಸುವ ಸಾಧ್ಯತೆ ಇದೆ.

ಹಿಂದೂ ಸಂಪ್ರದಾಯದ ಪ್ರಕಾರ ಜನನ ಹಾಗೂ ಮರಣವು ಸೂತಕ. ಯಾವುದೇ ಶುಭಕಾರ್ಯ ನಡೆಸುವಂತಿಲ್ಲ. ಆದರೆ, ಸೂತಕವು ರಾಜಕುಟುಂಬಕ್ಕೆ ಅನ್ವಯಿಸದ ಕಾರಣ, ದಸರೆಯು ಎಂದಿನಂತೆ ನಡೆಯಲಿದೆ ಎಂದು ಅವರು ತಿಳಿಸಿದರು.

About the author

ಕನ್ನಡ ಟುಡೆ

Leave a Comment