ಸಿನಿ ಸಮಾಚಾರ

ಅಲ್ಲು ಅರ್ಜುನ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ

ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ತಮ್ಮ  37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.  ಹುಟ್ಟುಹಬ್ಬದ ದಿನದಂದೇ  ಹೊಸ ಚಿತ್ರವನ್ನು ಘೋಷಿಸುವ ಮೂಲಕ ಅಭಿಮಾನಿಗಳಿಗೆ  ಬರ್ತ್ ಡೇ ಗಿಫ್ಟ್ ನೀಡಿದ್ದಾರೆ.2018ರಲ್ಲಿ ತೆರೆ ಕಂಡಿದ್ದ ನಾ ಪೆರು ಸೂರ್ಯ ಬಾಕ್ಸ್ ಆಫೀಸ್ ನಲ್ಲಿ ಸೋತ ನಂತರ ಯಾವುದೇ ಚಿತ್ರವನ್ನು ಅಲ್ಲು ಅರ್ಜುನ್ ಮಾಡಿರಲಿಲ್ಲ. ರಂಗಸ್ಥಳಂ ಖ್ಯಾತಿಯ ಸುಕುಮಾರ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಲಿದ್ದಾರೆ ಎಂಬುದು ತಿಳಿದುಬಂದಿದೆ.

ಅಲ್ಲು ಅರ್ಜುನ್ ಜೊತೆಗೆ ನಾಯಕಿಯಾಗಿ ಅಭಿನಯಿಸುತ್ತಿರುವುದನ್ನು ರಶ್ಮಿಕಾ ಮಂದಣ್ಣ ಟ್ವಿಟರ್ ಮೂಲಕ ಸ್ಪಷ್ಪಪಡಿಸಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಕಿಟ್ಟಿ ಎಂಬ ಮತ್ತೊಂದು ಚಿತ್ರದಲ್ಲೂ ಅಲ್ಲು ಅರ್ಜುನ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಈ ಎರಡು ಚಿತ್ರಗಳು ಈ ವರ್ಷವೇ  ಚಿತ್ರೀಕರಣವಾಗಲಿದೆ. ಒಂದು ಚಿತ್ರದಲ್ಲಿ ಬಾಲಿವುಡ್ ನಟ ನಾನಾ ಪಾಟೇಕರ್ ವಿಲನ್  ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಲಿವುಡ್ ಚಿತ್ರ ಇನ್ವೇನ್ ಷನ್ ಆಫ್ ಲೈಯಿಂಗ್ ಚಿತ್ರದ ರೂಪಾಂತರವಾಗಿದ್ದು, ಪ್ಯಾನ್ ಇಂಡಿಯಾ ನಟನಾಗಿ ವ್ಯಾಪಕ ಪ್ರಚುರಪಡಿಸಲು ಚಿತ್ರ ನಿರ್ಮಾಣಗಾರರು ಯೋಚಿಸಿದ್ದಾರೆ ಎಂಬುದು ತಿಳಿದುಬಂದಿದೆ.

About the author

ಕನ್ನಡ ಟುಡೆ

Leave a Comment