ರಾಜಕೀಯ

ಅವನ್ಯಾವನೊ ಯಶ್ ಅಂತೆ, ನನಗೋಸ್ಕರ ಕಾರ್ಯಕರ್ತರು ಸುಮ್ಮನಿದ್ದಾರೆ: ಸಿಎಂ ಕುಮಾರಸ್ವಾಮಿ ಧಮ್ಕಿ

ಮಂಡ್ಯ: ಅವನ್ಯಾವನೋ ಯಶ್ ಅಂತೆ. ನಮ್ಮ ಪಕ್ಷವನ್ನೇ ಕಳ್ಳರ ಪಕ್ಷ ಅಂತಾ ಕರಿತಾನೇ. ನನ್ನ ಪಕ್ಷದ ಕಾರ್ಯಕರ್ತರು ನನಗೋಸ್ಕರ ಸುಮ್ಮನಿದ್ದಾರೆ ಇಲ್ಲದಿದ್ದರೆ ಯಶ್ ಗತಿ ಬೇರೆಯಾಗಿರುತ್ತಿತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ನಾನು ಕಲಾವಿದರೂ ಅಂತಾ ಗೌರವ ಕೊಟ್ಟಿದ್ದಕ್ಕೆ, ನನ್ನ ಪಕ್ಷ ಕಳ್ಳರ ಪಕ್ಷ ಅಂತಾ ಹಳ್ಳಿಗಳ ಕಡೆ ಬಂದು ಹೇಳುತ್ತಾನೆ. ನನ್ನ ಕಾರ್ಯಕರ್ತರು ಬಾಯಿ ಮುಚ್ಚಿಕೊಂಡು ಸುಮ್ಮನಿರುವುದು ನಮ್ಮ ಕುಮಾರಸ್ವಾಮಿಗೆ ತೊಂದರೆ ಆಗಬಾರದು ಅಂತಾ ಇಲ್ಲದಿದ್ದರೆ ನಿಮ್ಮ ಗತಿ ಏನಾಗುತ್ತಿತ್ತೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ನಾನು ಒಬ್ಬ ನಿರ್ಮಾಪಕನೇ. ಇಂತವರನ್ನು ಹಾಕಿಕೊಂಡು ನಾನು ಸಿನಿಮಾ ಮಾಡಿದ್ದೇನೆ. ನನ್ನಂತ ನಿರ್ಮಾಪಕರು ಇಲ್ಲದಿದ್ದರೆ ಇವರು ಏನು ಮಾಡುತ್ತಾರೆ. ಸಿನಿಮಾದಲ್ಲಿ ಹೇಳಿದಂತೆ ನಾಲ್ಕು ಡೈಲಾಗ್ ಹೊಡೆದು ಸುಮ್ಮನೆ ಹೋಗುತ್ತಾರೆ ಎಂದೆಲ್ಲಾ ಟೀಕಾ ಪ್ರಹಾರ ನಡೆಸಿದರು. ಬಹಿರಂಗ ಪ್ರಚಾರಕ್ಕೆ ನಾಳೆ ಕೊನೆಯ ದಿನವಾಗಿದ್ದು ಈ ಹಿನ್ನೆಲೆಯಲ್ಲಿ ಜನರನ್ನು ತಮ್ಮತ್ತ ಸೆಳೆಯುವ ಸಲುವಾಗಿ ಕುಮಾರಸ್ವಾಮಿ ಅವರು ನಾನಾ ಕಡೆ ರ್ಯಾಲಿಗಳನ್ನು ನಡೆಸಿ ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment