ರಾಜ್ಯ ಸುದ್ದಿ

ಅವಳಿ ನಗರದಲ್ಲಿ ಜೋಡಿ ಕೊಲೆ

ಹುಬ್ಬಳ್ಳಿ: ಅವಳಿ ನಗರದಲ್ಲಿ ಒಂದೇ ರಾತ್ರಿ ಜೋಡಿ ಕೊಲೆ ನಡೆದಿದ್ದು, ಜನತೆ ಭಯಭೀತರಾಗಿದ್ದಾರೆ. ಹುಬ್ಬಳ್ಳಿಯ ತಾಬಿಬ್ ಲ್ಯಾಂಡ್ ಬಳಿ ತಲ್ವಾರ್​ನಿಂದ ಹೊಡೆದು ಇಮ್ತಿಯಾಜ್ ಕಣವಿ (35) ಅಲಿಯಾಸ್ ಕಾಡತೂಸ್ ಎಂಬಾತನನ್ನು ಕೊಲೆ ಮಾಡಲಾಗಿದೆ. ಮೃತ ವ್ಯಕ್ತಿ ಹಾಗೂ ದಾವೂದ್ ಹುಬ್ಬಳ್ಳಿಯ ಮಂಟೂರ್ ರಸ್ತೆಯ ಮೌಲಾಲಿ ಜೊಪಡಿ ನಿವಾಸಿ. ಊಟಕ್ಕೆಂದು ಹೊರಗಡೆ ಬಂದಾಗ ದಾವೂದ್ ನಾದಫ್ ಮತ್ತು ಈತನ ನಡುವೆ ಜಗಳ ಸಂಭವಿಸಿ ಘಟನೆ ನಡೆದಿದೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಸಂಜೀವಕುಮಾರ ಬೆಂಗೇರಿ (20) ಎಂಬ ಯುವಕನನ್ನು ಮನೆಯಿಂದ ಕರೆದುಕೊಂಡು ಹೋಗಿ ಬ್ಯಾಟ್‌ನಿಂದ ಕೊಲೆ ಹೊಡೆದು ಕೊಲೆ ಮಾಡಿದ್ದಾರೆ. ನಗರದ ರೇವಡ್ಯಾಳ ಕ್ರಾಸ್ ಬಳಿ ಘಟನೆ ನಡೆದಿದ್ದು, ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

About the author

ಕನ್ನಡ ಟುಡೆ

Leave a Comment