ರಾಜಕೀಯ

ಅಶೋಕ್ ಖೇಣಿ ನೈಸ್‌ ಹಗರಣ ಮುಚ್ಚಿ ಹಾಕಲು  ಕಾಂಗ್ರೆಸ್‌ಗೆ ಸೇರ್ಪಡೆ ಎಂದು ಹೇಳಿರುವ  ಕುಮಾರಸ್ವಾಮಿ

ರಾಯಚೂರು: ಅಶೋಕ್‌ ಖೇಣಿ ಕಾಂಗ್ರೆಸ್‌ಗೆ ಸೇರ್ಪಡೆ ನೈಸ್ ಹಗರಣ ಮುಚ್ಚಿಹಾಕುವ ಸಂಚಿಗೆ  ಎಂದು ಜೆಡಿಎಸ್‌ ಮುಖಂಡ ಕುಮಾರಸ್ವಾಮಿ ಹೇಳಿದ್ದಾರೆ.

ಮಾನ್ವಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಖೇಣಿ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಚುನಾವಣೆಗೆ ಫಂಡಿಂಗ್ ಮಾಡುವ ಸಮಸ್ಯೆಯಿಲ್ಲ. ಕಾಂಗ್ರೆಸ್ ಮೊದಲಿಂದಲೂ ಭ್ರಷ್ಟರಿಗೆ ಆಶ್ರಯ ನೀಡುತ್ತಾ ಬಂದಿದೆ ಮತ್ತು ಅದು ಇನ್ನೂ ಮುಂದುವರೆದಿದೆ ಎಂದು ಹೇಳಿದ್ದಾರೆ.

ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಯುಗಾದಿ ನಂತರ ಬಿಡುಗಡೆಯಾಗಲಿದೆ. ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment