ರಾಜ್ಯ

ಆಂಗ್ಲ ಭಾಷೆಯಲ್ಲೇ ತಜ್ಞರ ಸಾಕ್ಷ್ಯಾ ದಾಖಲು ಕಡ್ಡಾಯ

ಅಧೀನ ನ್ಯಾಯಾಲಯಗಳು ಇನ್ನು ಮುಂದೆ ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಣಿತರುವಿಜ್ಞಾನಿಗಳುವೈದ್ಯರು ಮತ್ತಿತರ ತಜ್ಞರ ಹೇಳಿಕೆಗಳನ್ನು ಕಡ್ಡಾಯವಾಗಿ ಆಂಗ್ಲಭಾಷೆಯಲ್ಲಿಯೇ ದಾಖಲಿಸಬೇಕೆಂದು ಹೈಕೋರ್ಟ್ ಸುತ್ತೋಲೆ ಹೊರಡಿಸಿದೆಇತ್ತೀಚೆಗೆ ಹೈಕೋರ್ಟ್ನ ರಿಜಿಸ್ಟರ್ ಜನರಲ್  ಹೊರಡಿಸಿರುವ ಆದೇಶದಲ್ಲಿರಾಜ್ಯದಲ್ಲಿರುವ ಎಲ್ಲ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ಯಾವುದೇ ಕೋರ್ಟ್ಗಳಲ್ಲಿ ತಜ್ಞರು ಹೇಳಿಕೆಗಳನ್ನು ಸಾಕ್ಷ್ಯವನ್ನಾಗಿ ದಾಖಲಿಸುವಾಗ ಅದನ್ನು ಇಂಗ್ಲಿಷ್ ಭಾಷೆಯಲ್ಲಿಯೇ ದಾಖಲು ಮಾಡಿಕೊಳ್ಳಬೇಕು‘ ಎಂದು ಸೂಚಿಸಲಾಗಿದೆ.

ಏಕೆ  ಕ್ರಮ?

ಇತ್ತೀಚೆಗೆ ಮೂರು ಕ್ರಿಮಿನಲ್ ಮೇಲ್ಮನವಿ  ಪ್ರಕರಣಗಳಲ್ಲಿ ಸಾಕ್ಷ್ಯ ದಾಖಲಿಸುವಲ್ಲಿ ಆಗಿರುವ ಲೋಪವನ್ನು ಗಮನಿಸಿಆಂಗ್ಲ ಭಾಷೆಯಲ್ಲಿಯೇ ಅಧೀನ ನ್ಯಾಯಾಲಯಗಳು ತಜ್ಞರ ಸಾಕ್ಷ್ಯವನ್ನು ದಾಖಲಿಸುವಂತಾಗಬೇಕು ಎಂದು ಹೈಕೋರ್ಟ್ ಆದೇಶಿಸಿತ್ತುಬಹುತೇಕ ಅಪರಾಧ ಪ್ರಕರಣಗಳಲ್ಲಿ ತಜ್ಞರು ತಾಂತ್ರಿಕ ಅಂಶಗಳು ಇರುವುದರಿಂದ ಆಂಗ್ಲಭಾಷೆಯಲ್ಲಿ ಸಾಕ್ಷ್ಯ ನುಡಿಯುತ್ತಾರೆಆದರೆ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರುಅವರ ಹೇಳಿಕೆಯನ್ನು ಗ್ರಹಿಸಿ ಅದನ್ನು ಕನ್ನಡಕ್ಕೆ ಅನುವಾದಿಸಿ ಅದನ್ನು ಕನ್ನಡದಲ್ಲಿಯೇ ದಾಖಲು ಮಾಡುತ್ತಾರೆಆದರೆಬಹುತೇಕ ಹೇಳಿಕೆ ಅಥವಾ ಸಾಕ್ಷ್ಯಗಳು ಕರಾರುವಾಕ್ಕಾಗಿರುವುದಿಲ್ಲ ಸ್ಪಷ್ಟತೆ ಇರುವುದಿಲ್ಲ ಮತ್ತು ಖಚಿತವಾಗಿರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆತಜ್ಞರ ಸಾಕ್ಷ್ಯ ಅಥವಾ ಅಭಿಪ್ರಾಯಗಳು ಸರಿಯಾಗಿಸ್ಪಷ್ಟವಾಗಿ ಅಥವಾ ನಿಖರವಾಗಿ ಇಲ್ಲವಾದರೆಸಹಜವಾಗಿಯೇ ಅದರಿಂದ ನ್ಯಾಯ ದೊರಕುವುದಿಲ್ಲಆದ್ದರಿಂದ ಅಧೀನ ನ್ಯಾಯಾಲಯಗಳು ಯಾವುದೇ ಬಗೆಯ ಪ್ರಕರಣಗಳಲ್ಲಿ ತಜ್ಞರ ಸಾಕ್ಷ್ಯಗಳನ್ನು ಅಥವಾ ಹೇಳಿಕೆಗಳನ್ನು ದಾಖಲು ಮಾಡಿಕೊಂಡರೂ ಅದು ಆಂಗ್ಲಭಾಷೆಯಲ್ಲಿಯೇ ಇರಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

 ಕ್ರಿಮಿನಲ್ ಪ್ರಕರಣಗಳಲ್ಲಿ ಕಷ್ಟ:

ನಂಜನಗೂಡಿನಲ್ಲಿ ನಡೆದ ಕೊಲೆಪ್ರಕರಣದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಮತ್ತು ವೈದ್ಯರ ಸಾಕ್ಷ್ಯವನ್ನು ಕನ್ನಡದಲ್ಲಿ ದಾಖಲುಮಾಡಲಾಗಿತ್ತುಅದರಲ್ಲಿ ವೈದ್ಯರು ಕೆಲವು ಮೆಡಿಕಲ್ಟರ್ಮಿನಾಲಜಿಗಳನ್ನು ಬಳಸಿದ್ದರುಅವುಗಳನ್ನು ಅಧೀನ ನ್ಯಾಯಾಲಯದ ನ್ಯಾಯಾಧೀಶರು ಕನ್ನಡಕ್ಕೆ ಅನುವಾದ ಮಾಡಿ ದಾಖಲಿಸಿದಾಗ ಅದು ಬೇರೆಯ ಅರ್ಥ ಪಡೆದುಕೊಂಡಿತು.

About the author

ಕನ್ನಡ ಟುಡೆ

Leave a Comment