ರಾಷ್ಟ್ರ ಸುದ್ದಿ

ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರ ಪ್ರದರ್ಶಿಸುತ್ತಿದ್ದ ಚಿತ್ರಮಂದಿರದ ಮೇಲೆ ಕೈ ಕಾರ್ಯಕರ್ತರ ದಾಳಿ

ಕೊಲ್ಕತ್ತಾ:  ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಮೇಲೆ ಪಶ್ಟಿಮ ಬಂಗಾಳ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ನಡೆದಿದೆ.ಕಾಂಗ್ರೆಸ್ ಧ್ವಜ ಹಿಡಿದು ಕೇಂದ್ರ ಕೊಲ್ಕತ್ತಾ ಕ್ವೆಸ್ಟ್ ಮಾಲ್ ನ ಐನಾಕ್ಸ್ ಮಲ್ಟಿಪ್ಲೆಕ್ಸ್  ಚಿತ್ರಮಂದಿರಕ್ಕೆ ನುಗ್ಗಿರುವ ಕಾಂಗ್ರೆಸ್  ಪ್ರತಿಭಟನಾಕಾರರು, ಚಿತ್ರ ಪ್ರದರ್ಶಿಸದಂತೆ ಅಡ್ಡಿಯನ್ನುಂಟುಮಾಡಿದ್ದಾರೆ.

ಪಕ್ಷದಲ್ಲಿನ ಹಿರಿಯ ನಾಯಕರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಲಾಗಿದ್ದು, ಎಲ್ಲಿಯೂ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿ ವೀಕ್ಷಕರನ್ನು ಅಲ್ಲಿಂದ ಓಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಕೇಶ್ ಸಿಂಗ್,  ಪಕ್ಷದ ಹಿರಿಯ ಮುಖಂಡರಾದ ಸೋನಿಯಾಗಾಂಧಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಅವರನ್ನು ಈ ಚಿತ್ರದಲ್ಲಿ ಅಪಮಾನ ಮಾಡಲಾಗಿದ್ದು. ಎಲ್ಲಿಯೂ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಕೆಲ ಸಮಯದ ನಂತರ  ಪೊಲೀಸರ ನೆರವಿನೊಂದಿಗೆ ಚಿತ್ರ ಪ್ರದರ್ಶನ ಮುಂದುವರೆಯಿತು. ಪರಿಸ್ಥಿತಿ ನಿಯಂತ್ರಣ ಬಂದಿದ್ದು, ಪ್ರದರ್ಶನ ಮುಂದುವರೆದಿದೆ ಎಂದು ಐನಾಕ್ಸ್  ವಕ್ತಾರರು ತಿಳಿಸಿದ್ದಾರೆ. ಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವುದಿಲ್ಲ ಎಂದು ಚಿತ್ರಮಂದಿರದ ಮಾಲೀಕರು ತಿಳಿಸಿದ್ದಾರೆ. ದಕ್ಷಿಣ ಕೊಲ್ಕತ್ತಾದ ಭವಾನಿಪುರ ಮತ್ತು ಉತ್ತರ ಬಂಗಾಳದ ಸಿಲಿಗುರಿಯಲ್ಲಿನ ಹಲವು ಚಿತ್ರಮಂದಿರಗಳ ಮುಂದೆ ಸಹ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವ ಬಗ್ಗೆ ವರದಿಯಾಗಿದೆ.

About the author

ಕನ್ನಡ ಟುಡೆ

Leave a Comment