ಸುದ್ದಿ

ಆಧಾರ ಕಾರ್ಡ್ ಸಮಸ್ಯೆ : ಸಹಾಯಕ ಆಯುಕ್ತರಿಗೆ ಮನವಿ

ಲಿಂಗಸುಗೂರು : ಸ್ಥಳೀಯ ಪ್ರಗತಿ ಗ್ರಾಮೀಣ ಬ್ಯಾಂಕ್ ಮತ್ತು ಅಂಚೆ ಕಛೇರಿಯಲ್ಲಿನ ಆಧಾರ ಕಾರ್ಡ್ ನೋಂದಣಿ ಮತ್ತು ತಿದ್ದುಪಡಿಗೆ ರೈತರು ವಿಧ್ಯಾರ್ಥಿಗಳು ವೃದ್ಧರು ಅಂಗವಿಕಲರು ಎದುರಿಸುತ್ತಿರುವ ಗೊಂದಲ- ಸಮಸ್ಯೆಗಳ ಕುರಿತಾಗಿ ಮಾನ್ಯ ಸಹಾಯಕ ಆಯುಕ್ತರಿಗೆ ವಿವರಿಸಿ,   ಆದಷ್ಟು ಬೇಗ ಆಧಾರ ನೋಂದಣಿ ಮತ್ತು ತಿದ್ದುಪಡಿಗೆ ತಲೆದೂರಿರುವ ಬಹುದಿನಗಳ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿ, ಈ ಮೊದಲು ಇದ್ದಂತಹ 6-8 ಆಧಾರ ನೋಂದಣಿ ಕೆಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲು, ಹೈದರಾಬಾದ ಕರ್ನಾಟಕ ರೈತ ಸಂಘ ಹಾಗೂ ಅನ್ನದಾತ ಬ್ರಿಗೇಡ್ ನ ಪದಾಧಿಕಾರಿಗಳು ಸ್ಥಳಿಯರು ಮತ್ತು ಸಮಸ್ಯೆ ಎದುರಿಸಿದ ಸುತ್ತಲಿನ ಗ್ರಾಮದ ರೈತರು ಮನವಿ ಪತ್ರ ಸಲ್ಲಿಸಿದರು.

  ಈ ಸಂದರ್ಭದಲ್ಲಿ ಹೈದರಾಬಾದ ಕರ್ನಾಟಕ ರೈತ ಸಂಘ ಹಾಗೂ ಅನ್ನದಾತ ಬ್ರಿಗೇಡ್ ನ ಜಿಲ್ಲಾಧ್ಯಕ್ಷರಾದ  ರಾದ ಮಲ್ಲನಗೌಡ ಪಾಟೀಲ್ ಉಪಾಧ್ಯಕ್ಷರಾದ ಮಲ್ಲೇಶ ಯಲಗಲದಿನ್ನಿ, ಶಂಕರ ಮೆಹರವಾಡೆ (ಬಿಬಿಸಿ),  ನೀರಲಕರಾ ಗ್ರಾಮದ ವೀರೇಶ, ಶಿವಪ್ಪ, ಅಮರೇಶ,  ಅಯ್ಯಪ್ಪ ಈಚನಾಳ, ಶಿವಪ್ಪ ಗೋರೆಬಾಳ ತಾಂಡ, ಶಂಕ್ರಪ್ಪ ಚೌಹಾಣ ಭೂಪುರ ತಾಂಡ ಹಾಜರಿದ್ದರು.

About the author

ಕನ್ನಡ ಟುಡೆ

Leave a Comment